ಎಪಿಎಂಸಿಯಲ್ಲಕ ಈರುಳ್ಳಿ ಖರೀದಿಗೆ ಕಷ್ಟ: ಮಾರಾಟವಾಗದ ಉತ್ಪನ್ನದ ಮುಂದೆ ರೈತನ ಕಣ್ಣೀರು

blank

ರಾಯಚೂರು: ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರಿಗೆ ಮಳೆಯ ಕಾರಣದಿಂದ ಬೆಳೆ ಹಾನಿಯಾಗಿ ಅತೀವ ಸಂಕಷ್ಟ ಎದುರಾಗಿದ್ದು, ಜತೆಗೆ ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲು ರೈತರು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿದಾರರ ಸಂಖ್ಯೆ ಕಡಿಮೆಯಿರುವ ಕಾರಣ ರೈತರು ಬೆಳೆದ ಈರುಳ್ಳಿಯನ್ನು ಖರೀದಿಸಲು ಎಪಿಎಂಸಿ ಪ್ರಾಂಗಣದಲ್ಲಿ ಕಷ್ಟವಾಗುತ್ತಿದ್ದು, ರೈತರ ಬೆಳೆ ಮಾರಾಟವಾಗುತ್ತಿಲ್ಲ.

ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಾಲ್‌ಈರುಳ್ಳಿಗೆ ಕನಿಷ್ಠ 1800ರೂ. ಹಾಗೂ ಗರಿಷ್ಠ 3500 ರೂ.ರವರೆಗೆ ಈರುಳ್ಳಿಯನ್ನು ಖರೀದಿಸಲಾಗುತ್ತಿದ್ದು, ಉತ್ಪನ್ನದ ಗುಣಮಟ್ಟದ ಅನುಸಾರವಾಗಿ ಬೆಲೆ ಏರಿಳಿತವಾಗುತ್ತದೆ.
ರಾಯಚೂರು ಎಪಿಎಂಸಿಯಲ್ಲಿ ಕೇವಲ 3 ಜನ ಈರುಳ್ಳಿ ಖರೀದಿದಾರರಿದ್ದು, ಅ.25ರವರೆಗೆ 2161 ಕ್ವಿಂಟಾಲ್ ಉತ್ಪನ್ನವನ್ನು ಟೆಂಡರಿಗಿಡಲಾಗಿದೆ. ಇರುವ ಈರುಳ್ಳಿ ಖರೀದಿಸಲು ಹೆಣಗಾಡುತ್ತಿರುವ ವರ್ತಕರು ಇದೀಗ ಬೇಸತ್ತು ಹೋಗಿದ್ದು, ಇನ್ನು ಮುಂದೆ ಬರುವ ಈರುಳ್ಳಿ ಖರೀದಿಗೆ ನಿರಾಸಕ್ತಿ ತೋರುತ್ತಿದ್ದಾರೆ.

ಎಪಿಎಂಸಿ ವ್ಯಾಪ್ತಿಯ ಹಾಗೂ ಇತರೆ ಭಾಗಗಳಿಂದ ಈರುಳ್ಳಿ ಮಾರಾಟ ಮಾಡಲು ರೈತರು ಎಪಿಎಂಸಿಗೆ ತರದೇ ಅನುಕೂಲವಾಗುವಲ್ಲಿ ಮಾರಾಟ ಮಾಡಬಹುದಾಗಿದೆ. ಖರೀದಿದಾರರ ಸಂಖ್ಯೆ ಕಡಿಮೆಯಿರುವುದರಿಂದ ಈರುಳ್ಳಿ ಖರೀದಿಗೆ ಕಷ್ಟವಾಗುತ್ತಿದೆ. ಇದರಿಂದ ರೈತರಿಗೂ ತೊಂದರೆ ಉಂಟಾಗುತ್ತ್ದೆ ಎಂದು ಎಪಿಎಂಸಿ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಾಗೂ ನೆರೆಯ ಜಿಲ್ಲೆಗಳಿಂದ ಈರುಳ್ಳಿಯನ್ನು ರಾಯಚೂರು ಎಪಿಎಂಸಿಗೆ ತರಲಾಗುತ್ತಿತ್ತು. ರಾಯಚೂರಿನಲ್ಲಿ ಅಷ್ಟೊಂದು ಈರುಳ್ಳಿಯನ್ನು ಖರೀದಿಸಲಾಗುತ್ತಿತ್ತು. ಇದೀಗ ಎಪಿಎಂಸಿ ವ್ಯಾಪ್ತಿಯ ರೈತರಿಂದಲೇ ಖರೀದಿ ಮಾಡಲಾಗುತ್ತಿಲ್ಲ ಎಂಬುವುದು ರೈತರ ಅಸಮದಾನದ ಮಾತುಗಳಾಗಿವೆ.

ಎಪಿಎಂಸಿಯಲ್ಲಿ ಖರೀದಿ ಆಗದ ಈರುಳ್ಳಿಯನ್ನು ರೈತರು ಸ್ಥಳೀಯ ತರಕಾರಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಿದ್ದು, ಉತ್ತಮ ಗುಣಮಟ್ಟ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 4000 ರೂ.ಗಳವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟಕ್ಕಾನುಸಾರವಾಗಿ 2 ಸಾವಿರ ರೂ., 3 ಸಾವಿರ ರೂ.ವರೆಗೆ ತರಕಾರಿ ಖರೀದಿದಾರರಿಂದ ಕೊಳ್ಳಲಾಗುತ್ತಿದೆ.

ಅನ್ಯ ಜಿಲ್ಲೆಗಳಿಗೆ ಈರುಳ್ಳಿಯನ್ನು ಮಾರಾಟ ಮಾಡಲು ಹೆಚ್ಚಿನ ಸಾಗಾಣಿಕೆ ವೆಚ್ಚವಾಗುವುದರಿಂದ ರೈತರಿಗೆ ಸಾಗಾಟ ವೆಚ್ಚ ಹೊರೆಯಾಗಿ ಪರಿನಮಿಸಿದೆ. ಬೆಳೆದ ಬೆಳೆ ಹಾನಿಯಾಗಿ, ಇನ್ನೊಂದೆಡೆ ಹೆಚ್ಚಿನ ಸಾಗಾಣಿಕೆಗೆ ವೆಚ್ಚ ಭರಿಸಲು ರೈತ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಪಿಎಂಸಿ ಅಧಿಕಾರಿಗಳು ಹೇಳುವ ಪ್ರಕಾರ ಈರುಳ್ಳಿ ಖರೀದಿದಾರರು ಕಡಿಮೆ ಇರುವುದರಿಂದ. ರೈತರು ಎಪಿಎಂಸಿಗೆ ಈರುಳ್ಳಿ ತಂದಲ್ಲಿ ಖರೀದಿ ಮಾಡಲು ವಿಳಂಬ ಉಂಟಾಗಿ ಈರುಳ್ಳಿ ಕೊಳೆತು ಹೋಗುವ ಸಾಧ್ಯತೆಗಳಿರುತ್ತವೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತದೆ.

ಈರುಳ್ಳಿ ಖರೀದಿ ಮಾಡಲು ಎಪಿಎಂಸಿಯಿಂದ ಪರವಾನಿಗೆ ಪಡೆಯುವುದು ಅತ್ಯಂತ ಮುಖ್ಯವಾಗಿದ್ದು, ಈರುಳ್ಳಿಗೆ ಬೇಡಿಕೆ ಇಲ್ಲದಿರುವ ಕಾರಣ ಹೆಚ್ಚಿನ ವರ್ತಕರು ಪರವಾನಿಗೆ ಪಡೆಯಲು ಸಹ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿದ್ದು, ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗಿದೆ. ರಾಯಚೂರು, ಮಾನ್ವಿ ಸಿಂಧನೂರು, ದೇವದುರ್ಗ ತಾಲೂಕುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ.

ಅನಧೀಕೃತ ಖರೀದದಾರರ ಭೀತಿ: 

ಪಿಎಂಸಿಯಲ್ಲಿರುವ ಖರೀದಿದಾರರು ಅಧಿಕೃತ ವರ್ತಕರಾದ್ದರಿಂದ ರೈತರು ಎಪಿಎಂಸಿಯಲ್ಲಿ ಮಾರಾಟ ಮಾಡಲು ಮುಂದಾಗುತ್ತಾರೆ. ಹೊರಗಡೆ ಮಾರಾಟ ಮಾಡಿದ್ದಲ್ಲಿ ಮಾರಾಟ ಮಾಡಲಾದ ಈರುಳ್ಳಿಗೆ ಸರಿಯಾದ ಬೆಲೆ ನೀಡದೇ ಅಥವಾ ರೈತರಿಂದ ಖರೀದಿ ಮಾಡಿದ ಈರುಳ್ಳಿ ಹಣ ನೀಡದೇ ಮೋಸ ಮಾಡುತ್ತಾರೆ ಎನ್ನುವ ಭೀತಿ ರೈತರಲ್ಲಿದೆ.

ಅ.25ಕ್ಕಿಂತ ಹಿಮದೆ ಮಾರುಕಟ್ಟೆಗೆ ತಂದಿದ್ದ ಈರುಳ್ಳಿ ಖರೀದಿ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಈಗಾಗಲೇ ಎಪಿಎಂಸಿಯಲ್ಲಿರುವ ಈರುಳ್ಳಿ ಖರೀದಿಸಲು ನಿರಾಕರಿಸಿದ್ದಲ್ಲಿ ಪರವಾನಿಗೆ ರದ್ದುಪಡಿಸಲು ಎಚ್ಚರಿಸಲಾಗಿದೆ. ರೈತರು ಬೇರೆಡೆ ಮಾರಾಟ ಮಾಡಬಹುದಾಗಿದೆ.                                            | ಆದನಗೌಡ, ಎಪಿಎಂಸಿ ಕಾರ್ಯದರ್ಶಿ, ರಾಯಚೂರು

ಅನ್ಯ ರಾಜ್ಯಗಳಲ್ಲಿ ಈರುಳ್ಳಿ ಖರೀದಿ ಮಾಡುವುದು ತೀರಾ ಕಡಿಮೆ, ಅದಲ್ಲದೇ ಬೇರೆಡೆ ಹೋಗಿ ಮಾರಾಟ ಮಾಡಲು ಅಧಿಕ ಸಾಗಾಣಿಕೆ ವೆಚ್ಚವಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರುತ್ತಿದ್ದೇನೆ.                | ಲಕ್ಷ್ಮಣಗೌಡ, ರೈತ, ಕಡಗಂದೊಡ್ಡಿ

Share This Article

ಒಂದು ತಿಂಗಳು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್​ ಸಂಗತಿ… Tongue

Tongue : ನಾಲಿಗೆ ನಮ್ಮ ದೇಹದ ಪ್ರಮುಖ ಅಂಗ. ನಾಲಿಗೆ ಇಲ್ಲದಿದ್ದರೆ ಯಾವುದೇ ಆಹಾರ ರುಚಿಸುವುದಿಲ್ಲ.…

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…