ರಾಯಚೂರು: ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸಂಭ್ರಮ, ಸಂಗೀತ ನೃತ್ಯೋತ್ಸವ ಹಾಗೂ ರಂಗಸಿರಿ ಪ್ರಶಸ್ತಿ ಪ್ರದಾನ ಸಮಾರಂ ಭವನ್ನು ಅ.13 ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಶಿವರಾಜ ಪಾಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ದೇವಣ್ಣ ನಾಯಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ರುಸ್ಮಾ ಅಧ್ಯಕ್ಷ ರಾಜಾ ಶ್ರೀನಿವಾಸ, ಬಿ.ನಾಗಪ್ಪ ನಾಯಕ ಬುಡದಿನ್ನಿ, ದಾನಪ್ಪ ಯಾದವ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಕಲಾವಿದರಾದ ಜಿಂದಪ್ಪ ಅಸ್ಥಿಹಾಳ, ನರಸಿಂಹಲು ಅರೋಲಿ, ಸರೀತಾ ಮಹೇಶ, ವಿಜಯಕುಮಾರ ದಿನ್ನಿ,ಜಯಪ್ಪ ಆಶಾಪೂರು, ರಘುಪತಿ ಪೂಜಾರ ದಿನ್ನಿ, ಚಿದಾನಂದ ನುಲಿ, ಸತ್ಯವತಿ ದೇಶಪಾಂಡೆ, ಜಾನ್ಸಿರಾಣಿ, ಬುಕ್ಕಿಟ್ ಕವಿತಾ, ಶಾರದಾ ಪೂಜಾರ್ ಸೇರಿ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ರಂಗಭೂಮಿ, ಸಾಹಿತ್ಯ, ಬಯಲಾಟ, ಸಂಗೀತ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 16 ಜನ ಸಾಧಕರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾರ್ವಜನಿಕರು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಬಿ.ಎಚ್.ಗುಂಡಳ್ಳಿ, ಕಲಾವಿದ ರಮೇಶ ರಾಂಪೂರು ಉಪಸ್ತಿತರಿದ್ದರು.