ರಾಯಚೂರು: ರಾಜ್ಯ ಸರ್ಕಾರ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಮೀಸಲು ಪಟ್ಟಿ ಪ್ರಕಟಿಸಿದೆ. ಜಿಲ್ಲೆಯ 2 ನಗರಸಭೆ, 4 ಪುಸಭೆ ಹಾಗೂ 4 ಪಟ್ಟಣ ಪಂಚಾಯತ್‌ಗಳ ಮೀಸಲು ಪ್ರಕಟವಾಗಿದೆ.
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪಟ್ಟಿಯನ್ನು ಪ್ರಕಟ ಮಾಡುವ ಮೂಲಕ ನಗರಾಭಿವೃದ್ಧಿ ಇಲಾಖೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಮುನ್ಸೂಚನೆಯನ್ನು ನೀಡಿದೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ಅಧಿಕಾರವನ್ನು ಪಡೆಯಲು ನಿರೀಕ್ಷಿಸುತ್ತಿದ್ದ ಜನಪ್ರತಿನಿಧಿಗಳು ಇದೀಗ ಚುನಾವಣೆಯ ತಯಾರಿಗೆ ತೊಡಗಲಿದ್ದಾರೆ.
ರಾಜ್ಯದಲ್ಲಿನ 61 ನಗರಸಭೆ , 123 ಪುರಸಭೆ , ಸೇರದಿಂತೆ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಪ್ರಕಟ; ನಗರಸಭೆ, ಪುರಸಭೆ, ಪ.ಪಂ.ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಜಿಲ್ಲೆಯಲ್ಲಿ ಎರಡು ನಗರಸಭೆ ಇದ್ದು, ರಾಯಚೂರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯನ್ನು ನೀಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಅ)(ಬಿಸಿಎ) ಮೀಸಲಾತಿಯನ್ನು ನೀಡಿದೆ. ಸಿಂಧನೂರು ನಗರಸಭೆಗೆ ಅಧ್ಯಕ್ಷ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
ಪುರಸಭೆಗಳಾದ ದೇವದುರ್ಗಕ್ಕೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಬ)(ಬಿಸಿಬಿ) ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಮಾನ್ವಿ ಅಧ್ಯಕ್ಷ ಬಿಸಿಎ ಮಹಿಳೆ, ಉಪಾಧ್ಯಕ್ಷ ಪ.ಜಾ ಮಹಿಳೆ, ಮಸ್ಕಿ ಅಧ್ಯಕ್ಷ ಬಿಸಿಎ, ಉಪಾಧ್ಯಕ್ಷ ಪ.ಜಾ ಮಹಿಳೆ ಹಾಗೂ ಮುದಗಲ್ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯನ್ನು ನೀಡಲಾಗಿದೆ.
ಪಟ್ಟಣ ಪಂಚಾಯತ್‌ಗಳಾದ ಕವಿತಾಳ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪ.ಜಾ ಮಹಿಳೆ, ಸಿರವಾರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಪಂ ಮಹಿಳೆ, ತುರ್ವಿಹಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪ.ಜಾ, ಹಾಗೂ ಹಟ್ಟಿ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂ ಮಹಿಳಾ ಮೀಸಲಾತಿಯನ್ನು ಇಲಾಖೆ ನಿಗದಿಪಡಿಸಿದೆ.