ಮೊಸಳೆ ಹಿಡಿದ ಮೀನುಗಾರರು

ರಾಯಚೂರು: ನಗರದ ಹೊರ ವಲಯದ ಮರ್ಚೇಡ್ ಗ್ರಾಮದ ಕೆರೆಯಲ್ಲಿ ಸಾರ್ವಜನಿಕರ ಸಹಕಾರದಿಂದ ಮೊಸಳೆಯನ್ನು ಮೀನುಗಾರರು ಹಿಡಿದಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ಕೆರೆಯಲ್ಲಿ ಮೊಸಳೆ ಪತ್ತೆಯಾಗಿತ್ತು. ಮೀನುಗಾರರು ತೆಪ್ಪ ಮೂಲಕ ಮೀನು ಹಿಡಿಯಲು ಬಲೆ ಹಾಕುವಾಗ ಕಾಣಿಸಿಕೊಂಡಿದ್ದರಿಂದ ಗಾಬರಿಗೊಂಡು ಎಲ್ಲರೂ ದಡ ಸೇರಿದ್ದರು. ಭಯದಿಂದಾಗಿ ಕೆರೆಯಲ್ಲಿ ಮೀನು ಹಿಡಿಯಲು ಹಿಂದೇಟು ಹಾಕಿದ್ದರು. ಕೆರೆಯಲ್ಲಿ ಮೊಸಳೆ ಇರುವ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.ಕೆರೆಯಲ್ಲಿ ಹಾಕಿದ್ದ ಬಲೆಯನ್ನು ಮೀನುಗಾರರು ಭಾನುವಾರ ಬೆಳಗ್ಗೆ ಎಳೆದಾಗ ಸುಮಾರು 8 ಅಡಿ ಉದ್ದದ ಮೊಸಳೆ ಸೆರೆಯಾಗಿರುವುದು ಗೊತ್ತಾಗಿದೆ. ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮೊಸಳೆಯನ್ನು ವಶಕ್ಕೆ ಪಡೆದರು. ಮೀನುಗಾರರಾದ ನರಸಪ್ಪ, ಶರಣಪ್ಪ, ಅನಂತರೆಡ್ಡಿ, ವಿಜಯ, ಯಲ್ಲಪ್ಪ, ಶೇಖಪ್ಪ, ಶಫಿ ಇತರರಿದ್ದರು.

Leave a Reply

Your email address will not be published. Required fields are marked *