Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಮಾನ್ವಿ, ಲಿಂಗಸುಗೂರಿನಲ್ಲಿ ಶಿಕ್ಷಣ ಪಡೆದಿದ್ದ ಪರಶುರಾಮ

Thursday, 14.06.2018, 7:51 PM       No Comments

<< ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ > ಸಂಘಟನೆಗಳಲ್ಲಿ ಪಾಲ್ಗೊಳ್ಳದ ಆರೋಪಿ>>

ರಾಯಚೂರು: ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಪರಶುರಾಮ ವಾಗ್ಮೋರೆ, ಜಿಲ್ಲೆಯ ಮಾನ್ವಿ ಮತ್ತು ಲಿಂಗಸುಗೂರು ಶಾಲೆ-ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಪೊಲೀಸರು ಅಲ್ಲಿಗೆ ತೆರಳಿ ಮಾಹಿತಿ ಪಡೆದಿದ್ದಾರೆ.

ಮಾನ್ವಿ ಪಟ್ಟಣದ ಇಸ್ಲಾಂ ನಗರದಲ್ಲಿ ಪರಶುರಾಮ ಕುಟುಂಬ ಬಾಡಿಗೆ ಮನೆಯಲ್ಲಿತ್ತು. ಒಂದರಿಂದ ಏಳನೇ ತರಗತಿವರೆಗೆ (1997 ರಿಂದ 2005) ಇಲ್ಲಿನ ಅಲ್‌ಪುರ್ ಖಾನ್ ಹಿರಿಯ ಪ್ರಾಥಮಿಕ ಶಾಲೆ, ಎಂಟರಿಂದ ಹತ್ತನೇ ತರಗತಿವರೆಗೆ (2005 ರಿಂದ 2007) ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ.

ನಂತರ ಕಲ್ಮಠ ಪಿಯು ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ (2007 ರಿಂದ 2009) ಅಭ್ಯಾಸ ಮಾಡಿದ್ದು, ಒಂದು ಬಾರಿ ಅನುತ್ತೀರ್ಣರಾಗಿ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅದೇ ಕಲ್ಮಠ ಕಾಲೇಜಿನಲ್ಲಿ ಬಿಕಾಂ ಪ್ರವೇಶ ಪಡೆದಿದ್ದರು. ಇದೇ ಕಾಲೇಜಿನಲ್ಲಿ ಬಿಕಾಂ 1 ಮತ್ತು 2ನೇ ಸೆಮಿಸ್ಟರ್ (2009-10) ಅಭ್ಯಾಸ ಮಾಡಿದ್ದು, ಬಹಳಷ್ಟು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. 2010ರಲ್ಲಿ ಲಿಂಗಸುಗೂರು ಪಟ್ಟಣದ ವಿಸಿಬಿ ಕಾಲೇಜಿನಲ್ಲಿ ಬಿಕಾಂ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆದರೂ ಅಲ್ಲೂ ಅನುತ್ತೀರ್ಣರಾಗಿ, ನಂತರ ಸ್ವಗ್ರಾಮಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.

ಶಾಲಾ-ಕಾಲೇಜು ಅವಧಿಯಲ್ಲಿ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳದ ಪರಶುರಾಮ, ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ. ಲಿಂಗಸುಗೂರಿನ ವಿಸಿಬಿ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಕೇವಲ ಪರೀಕ್ಷೆಗೆ ಮಾತ್ರ ಹಾಜರಾಗಿದ್ದ.

ಬಾಂಡೆ ಸಾಮಾನು ಮಾರಾಟ ಮಾಡುವ ಸಂಬಂಧಿಕರೊಂದಿಗೆ ಪರಶುರಾಮ ಮಾನ್ವಿಗೆ ಬಂದಿದ್ದರು ಎಂಬ ಮಾಹಿತಿಯಿದೆ. ಕಾಲೇಜು ಅಂಕಪಟ್ಟಿ ಮತ್ತು ಟಿ.ಸಿ.ಯಲ್ಲಿ ಪರಶುರಾಮ ತಂದೆ ಅಶೋಕ ಮದರಿ ಎಂದು ಹೆಸರಿದೆ. ಆದರೆ, ಬಂಧಿತ ಪರಶುರಾಮ್ ಮತ್ತು ಜಿಲ್ಲೆಯಲ್ಲಿ ವ್ಯಾಸಂಗ ಮಾಡಿರುವ ಪರಶುರಾಮ ಒಬ್ಬರೇ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಪರಶುರಾಮ ವ್ಯಾಸಂಗ ಮಾಡಿರುವ ಕುರಿತು ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಚಾರಣೆ ಹೆದರಿಕೆಯಿಂದಾಗಿ ಅವರ ಬಗ್ಗೆ ಯಾರೂ ಹೆಚ್ಚಿನ ಮಾಹಿತಿ ಬಾಯಿ ಬಿಡುತ್ತಿಲ್ಲ. ಆದರೆ, ಹೆಸರು ಹೇಳಲು ಹಿಂಜರಿಯುತ್ತಿರುವ ಕೆಲವರು, ಯಾವುದೇ ಸಂಘಟನೆಗಳೊಂದಿಗೆ ಪರಶುರಾಮ ಗುರುತಿಸಿಕೊಂಡಿದ್ದಿಲ್ಲ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top