Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ತಾಂತ್ರಿಕತೆಯೊಂದಿಗೆ ಯಾಂತ್ರಿಕ ಬದುಕು

Thursday, 28.06.2018, 5:50 PM       No Comments

<< ಶ್ರೀ ಸುಬುಧೇಂದ್ರತೀರ್ಥರ ಕಳವಳ >  ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ >>

ರಾಯಚೂರು: ವೈಜ್ಞಾನಿಕ ಯುಗದಲ್ಲಿ ನಾಗರಿಕರು ತಾಂತ್ರಿಕತೆಯೊಂದಿಗೆ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕೆ ಹಳ್ಳಿ ಸೊಗಡಿನ ಸಂಸ್ಕೃತಿ, ಆಚರಣೆ ಮರೆಯಾಗುತ್ತಿವೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕಳವಳ ವ್ಯಕ್ತಪಡಿಸಿದರು.

ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮುದಾಯ, ಎಪಿಎಂಸಿ, ಹಟ್ಟಿ ಚಿನ್ನದ ಗಣಿ, ಕನ್ನಡ-ಸಂಸ್ಕೃತಿ ನಿರ್ದೇಶನಾಲಯ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ಹಬ್ಬದ ಎರಡನೇ ದಿನ ಎರಡು ಟನ್ ಭಾರ ಎಳೆವ ಸ್ಪರ್ಧೆಗೆ ಗುರುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಆಚರಣೆಗಳು ಮರೆಯುತ್ತಿರುವ ಇಂಥ ಸಂದರ್ಭದಲ್ಲಿ ಮುನ್ನೂರು ಕಾಪು ಸಮುದಾಯವು ಅವನ್ನೆಲ್ಲ ನೆನಪಿಸುವ ಕಾರ್ಯಕ್ಕೆ ಮುಂದಾಗಿದ್ದು ಶ್ಲಾಘನಿಯ. ಹಳ್ಳಿಗಳ ಹಬ್ಬಗಳು ಸಂಸ್ಕೃತಿ ಬೇರುಗಳಾಗಿವೆ.ದೇಶ, ರಾಜ್ಯದ ಪ್ರಾಚೀನ ಕಾಲದ ಸಂಪ್ರದಾಯ, ಆಚರಣೆ ಹಾಗೂ ಸಂಸ್ಕೃತಿಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯತೆ. ಆಟ, ಆಚರಣೆಗಳು, ಶಕ್ತಿ ಕ್ರೀಡೆಗಳ ಪ್ರದರ್ಶನಗಳ ಬಗ್ಗೆ ತಿಳಿಸುವ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಿದೆ. ಆದರೆ, ಅವೆಲ್ಲವನ್ನೂ ಮೊಬೈಲ್‌ನಲ್ಲಿ ನೋಡಿಯೆ ತಿಳಿಯುವ ಕಾಲ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಮುದಾಯದಲ್ಲಿ ನವ ಚೈತನ್ಯ ತುಂಬಿ, ಅವರ ಮಾನಸಿಕ ಶಕ್ತಿಯ ಪ್ರಬಲತೆ ಹೆಚ್ಚಿಸುವ ಹಬ್ಬವೇ ಕಾರಹುಣ್ಣಿಮೆ. ಒಕ್ಕಲುತನ ಅವಲಂಬಿತ ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ, ಸಮೃದ್ಧಿ ಬೆಳೆ ಬರಲಿ. ಪ್ರಕೃತಿ ವಿಕೋಪಗಳು ಬಾರದಿರಲಿ. ಸಂತಸ, ಸಮನ್ವಯ, ಸಹಬಾಳ್ವೆಯನ್ನು ರಾಯರು ಕರುಣಿಸಲಿ ಎಂದರು.

ಈ ಸಂದರ್ಭ ಶ್ರೀಗಳನ್ನು ಮುನ್ನೂರು ಕಾಪು ಸಮುದಾಯದಿಂದ ಸನ್ಮಾನಿಸಲಾಯಿತು. ಶ್ರೀಮಠದಿಂದಲೂ ಸಾಂಸ್ಕೃತಿಕ ಹಬ್ಬದ ರೂವಾರಿ, ಸಮುದಾಯದ ಹಿರಿಯ ನಾಯಕ ಎ.ಪಾಪಾರೆಡ್ಡಿಯನ್ನು ಗೌರವಿಸಲಾಯಿತು.

ಖ್ಯಾತ ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸ ಗುರೂಜಿ, ಸಮುದಾಯದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಅಮರೇಗೌಡ ಹಂಚಿನಾಳ, ಗಂಗಾಮತಸ್ಥ ಸಮುದಾಯದ ಪ್ರಮುಖ ಕೆ.ಶಾಂತಪ್ಪ, ಉಟ್ಕೂರು ಲಕ್ಷ್ಮಯ್ಯ, ಫಾರ್ಮಸಿ ಕಾಲೇಜಿನ ಉಪಾಧ್ಯಕ್ಷ ಗಧಾರ ಬೆಟ್ಟಪ್ಪ ಸೇರಿ ಪ್ರಮುಖರಾದ ಪುಂಡ್ಲ ನರಸರೆಡ್ಡಿ, ಜಿ.ನರಸರೆಡ್ಡಿ, ಶೇಖರರೆಡ್ಡಿ, ಆಂಜನೇಯ, ಪಿ.ಚಂದ್ರಶೇಖರರೆಡ್ಡಿ, ಜಿ.ವಿ.ನಾರಾಯಣರೆಡ್ಡಿ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back To Top