23 ಸುತ್ತಿನಲ್ಲಿ ಮತ ಎಣಿಕೆ – ಜಿಲ್ಲಾ ಚುನಾವಣಾಧಿಕಾರಿ ಬಿ.ಶರತ್

ರಾಯಚೂರು: ರಾಯಚೂರು ಲೋಕಸಭೆ ಚುನಾವಣೆಯ ಮತದಾನ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, 23 ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಎಲ್ಲ ಪ್ರಕ್ರಿಯೆ ಮೇಲೆ ಆಯೋಗದಿಂದ ನಿಯುಕ್ತಿಗೊಂಡ ವೀಕ್ಷಕರು ನಿಗಾ ಇರಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಶರತ್ ತಿಳಿಸಿದರು.

ನಗರದ ಎಸ್‌ಆರ್‌ಪಿಯು ಕಾಲೇಜಿನ ಮಾಧ್ಯಮ ಕೊಠಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಲ್‌ವಿಡಿ ಹಾಗೂ ಎಸ್‌ಆರ್‌ಪಿಯು ಕಾಲೇಜಲ್ಲಿ ಒಟ್ಟು 9 ಕೊಠಡಿಗಳನ್ನು ಎಣಿಕೆಗಾಗಿ ಕಾಯ್ದಿರಿಸಲಾಗಿದೆ. ಸ್ಥಳೀಯವಾಗಿ 8 ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಆಯೋಗದಿಂದ 8 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ 14 ಟೇಬಲ್, ಪ್ರತಿ ಕೊಠಡಿಯಲ್ಲಿ ಒಬ್ಬ ಆರ್‌ಒ ಹಾಗೂ ಸಹಾಯಕ ಚುನಾವಣಾಧಿಕಾರಿ ಇರಲಿದ್ದಾರೆ. 181 ಮೈಕ್ರೋ ಅಬ್ಸರವರ್ಸ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ಸುತ್ತಿನ ಎಣಿಕೆ ಮುಗಿದಾಕ್ಷಣ ಎರಡು ಇವಿಎಂಗಳನ್ನು ಆಯೋಗದಿಂದ ನಿಯುಕ್ತಿಗೊಂಡ ವೀಕ್ಷಕರು ಸಹಾಯಕರ ಸಹಕಾರದೊಂದಿಗೆ ಪುನಃ ಎಣಿಕೆ ಮಾಡಿ ತಾಳೆ ಮಾಡಲಿದ್ದಾರೆ ಎಂದರು.

ಆಯೋಗದಿಂದ ನಿಯುಕ್ತಿಗೊಂಡ ಎ.ಶೈಲಾ ಅವರು ಸುರಪುರ, ಶಹಪುರ, ಯಾದಗಿರಿ ವಿಧಾನಸಭೆಗಳ ಉಸ್ತುವಾರಿ ವಹಿಸಲಿದ್ದಾರೆ. ಸುಚೀಂದ್ರ ಪ್ರತಾಪ್ ಸಿಂಗ್ ಅವರು ರಾಯಚೂರು ನಗರ ಹಾಗೂ ಗ್ರಾಮೀಣ ಮತ್ತು ಮಾನ್ವಿ. ಸಾಸೀಮ್ ಕುಮಾರ ಬರಾಯಿ ಅವರು ದೇವದುರ್ಗ, ಲಿಂಗಸೂಗೂರು ಕ್ಷೇತ್ರಗಳ ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿ ಸುತ್ತಿನಲ್ಲಿ ಯಾರು ಎಷ್ಟು ಮತ ಪಡೆದಿದ್ದಾರೆ ಎನ್ನುವುದನ್ನು ಆವರಣದಲ್ಲಿ ಘೋಷಣೆ ಮಾಡಿಸಲಾಗುವುದಲ್ಲದೆ, ಆಯೋಗದ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *