ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ ರಂಗಪ್ಪ ನಾಯಕ

ರಾಯಚೂರು: ನಾಮಪತ್ರ ಹಿಂದೆಗೆದುಕೊಳ್ಳಲು ಕೊನೇ ದಿನ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜಾ ರಂಗಪ್ಪ ನಾಯಕ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ರಾಯಚೂರು ಲೋಕಸಭೆ ಕ್ಷೇತ್ರದ ಸ್ಪರ್ಧಾ ಕಣದಲ್ಲಿ ಅಂತಿಮವಾಗಿ ಐವರು ಉಳಿದಿದ್ದಾರೆ.

ಚುನಾವಣಾಧಿಕಾರಿ ಬಿ.ಶರತ್‌ಗೆ ಫಾರಂ ನಂ.6 ನೀಡುವ ಮೂಲಕ ಪಕ್ಷೇತರ ಅಭ್ಯರ್ಥಿ ರಾಜಾ ರಂಗಪ್ಪ ನಾಯಕ ಉಮೇದುವಾರಿಕೆ ಹಿಂಪಡೆದರು. ಅಂತಿಮವಾಗಿ ಕಣದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್ ಅಭ್ಯರ್ಥಿ ಎ.ಭಗವಂತ್ರಾಯ ನಾಯಕ, ಬಿಎಸ್‌ಪಿ ಅಭ್ಯರ್ಥಿಯಾಗಿ ವೆಂಕನಗೌಡ, ಉತ್ತಮ ಪ್ರಜಾಕೀಯ ಅಭ್ಯರ್ಥಿಯಾಗಿ ನಿರಂಜನ ನಾಯಕ, ಎಸ್‌ಯುಸಿಐ ಅಭ್ಯರ್ಥಿಯಾಗಿ ಕೆ.ಸೋಮಶೇಖರ ಉಳಿದಿದ್ದಾರೆ.