ರಾಯಚೂರು: ಕೆಕೆಆರ್‌ಡಿಬಿ ಅಧ್ಯಕ್ಷರ ವಿವೇಚನಾ ನಿಧಿ ಅಡಿಯಲ್ಲಿ ರಾಯಚೂರು ನಗರದ ವಿವಿಧ ಬಡಾವಣೆಗಳಲ್ಲಿ 1960 ಎಲ್‌ಇಡಿ ಬೀದಿಗಳನ್ನು ಅಳವಡಿಸಲಾಗುತ್ತಿದ್ದು, ಸ್ವಚ್ಛ, ಸುಂದರ ಹಾಗೂ ಸುರಕ್ಷಿತ ನಗರ ನಿರ್ಮಾಣಕ್ಕೆ ಸರ್ಕಾರ ಎಂದಿಗೂ ಬದ್ಧ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, 2.5 ಕೋಟಿ ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ರಸ್ತೆ ಮೇಲೆ ಸಂಚರಿಸಲು ತೊಂದರೆಯಾಗಬಾರದೆಂಬ ಹಿತದೃಷ್ಠಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾದ್ಯಕ್ಷ ಸಾಜೀದ್ ಸಮೀರ್, ನಗರಸಭೆ ಸದಸ್ಯರಾದ ಜಯಣ್ಣ, ಬಿ.ರಮೇಶ, ತಿಮ್ಮಾರಡ್ಡಿ, ಜಿಂದಪ್ಪ, ಕೆಆರ್‌ಐಡಿಲ್‌ನ ಇಇ ಮಹೇಶ್ವರಿ, ಪ್ರಮುಖರಾದ ಕೆ.ಶಾಂತಪ್ಪ, ರುದ್ರಪ್ಪ ಜಿ.ಶಿವಮೂರ್ತಿ, ನರಸಿಂಹಲು ಮಾಡಗಿರಿ, ಹರಿಬಾಬು, ಭೀಮರಾಯ, ವಾಹೀದ್, ಅಫ್ಜಲ್ ಅಲಿ, ಸಣ್ಣ ನರಸರಡ್ಡಿ, ತೇಜಪ್ಪ, ಗೋವಿಂದರಡ್ಡಿ, ಅರುಣ ದೋತರಬಂಡಿ, ಬಸವರಾಜ, ಅಫ್ರೋಜ್, ತೇಜಪ್ಪ, ಅಲೀ ಸೇರಿದಂತೆ ಅನೇಕರಿದ್ದರು.