ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ವಿದ್ಯಾಧರ ಪಾಟೀಲ್ ಉತ್ತಮ ಪ್ರದರ್ಶನ

ರಾಯಚೂರು: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 19 ವಯೋಮಾನದ ಭಾರತ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ರಾಯಚೂರಿನ ವಿದ್ಯಾಧರ ಪಾಟೀಲ್, ಇಂಗ್ಲೆಂಡ್ ವಿರುದ್ಧ ಭಾನುವಾರ ಜರುಗಿದ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣರಾಗಿ ಗಮನ ಸೆಳೆದಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 46.3 ಓವರ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು. ನಂತರ ಬ್ಯಾಟಿಂಗ್‌ಗೆ ಇಳಿದ ಭಾರತೀಯ ತಂಡ 39.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ. ಪಂದ್ಯದಲ್ಲಿ ವಿದ್ಯಾಧರ ಪಾಟೀಲ್ ಎಂಟು ಓವರ್ ಬಾಲಿಂಗ್ ಮಾಡಿ 46 ರನ್ ನೀಡಿ 2 ಪ್ರಮುಖ ವಿಕೆಟ್ ತೆಗೆದುಕೊಳ್ಳುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ವಿದ್ಯಾಧರ ಪಾಟೀಲ್ 19 ವಯೋಮಾನದೊಳಗಿನ ಭಾರತೀಯ ತಂಡಕ್ಕೆ ಆಯ್ಕೆಯಾದಲೇ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಅದರಂತೆ ಇಂಗ್ಲೆಂಡ್ ವಿರುದ್ಧ ಜರುಗಿದ ಮೊದಲ ಪಂದ್ಯಾವಳಿಯಲ್ಲಿ ಉತ್ತಮ ನೀಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
| ಕೆ.ಶರಣರೆಡ್ಡಿ, ಜಿಲ್ಲಾ ಸಂಚಾಲಕ, ಕೆಎಸ್‌ಸಿಎ, ರಾಯಚೂರು.

Leave a Reply

Your email address will not be published. Required fields are marked *