More

    ಭಾರತ ದುಡಿಯುವ ವರ್ಗದ ಜನರ ದೇಶ : ಸಸಿಕಾಂತ ಸೆಂಥಿಲ್

    ಐಎಎಸ್ ನಿವೃತ್ತ ಅಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿಕೆ

    ರಾಯಚೂರು: ಭಾರತ ದುಡಿಯುವ ವರ್ಗದ ಜನರ ದೇಶವಾಗಿದ್ದು, ಹಿಂದು ದೇಶ ಎನ್ನುವ ಭ್ರಮೆಯನ್ನು ತುಂಬುವ ಮೂಲಕ ಜಾತೀಯತೆ ಜೀವಂತವಾಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಐಎಎಸ್ ನಿವೃತ್ತ ಅಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದರು.

    ಸ್ಥಳೀಯ ರಾಯಲ್ ಪ್ಯಾಲೇಸ್‌ನಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ಗುರುವಾರ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎನ್‌ಆರ್‌ಸಿ, ಎನ್‌ಪಿಆರ್ ಕೇವಲ ಮುಸ್ಲಿಮರ ಸಮಸ್ಯೆ ಎಂದು ಹೇಳಲಾಗುತ್ತಿದೆ. ಆದರೆ ಅದು ಪ್ರತಿಯೊಬ್ಬ ಭಾರತೀಯರ ಸಮಸ್ಯೆಯಾಗಿದೆ. ನಮಗೆ ಸಂವಿಧಾನವೇ ಶ್ರೇಷ್ಠವಾಗಿದ್ದು, ಕೇವಲ ಆಡಳಿತ ನಿರ್ವಹಣೆಗೆಂದು ನಾವು ತಂದ ಸರ್ಕಾರ ಸಂವಿಧಾನ ಬದಲಾಯಿಸಲು ಮುಂದಾಗಿರುವುದು ದುರಂತದ ವಿಷಯವಾಗಿದೆ.

    ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ಮಾಡುವ ಎಲ್ಲ ಕೆಲಸಗಳನ್ನು ದೇಶಕ್ಕಾಗಿ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಭಾರತವನ್ನು ಒಟ್ಟು ಮಾಡುತ್ತೇವೆ ಎಂದು ಹೇಳಿ ಕಾಶ್ಮೀರದ ಜನರನ್ನು ಜೈಲಿನಲ್ಲಿ ಇರಿಸುವ ಕೆಲಸ ಮಾಡಲಾಗಿದೆ ಎಂದು ಟೀಕಿಸಿದರು.

    ವೇದಿಕೆ ಪದಾಧಿಕಾರಿಗಳಾದ ಆರ್.ಮಾನಸಯ್ಯ, ರಾಘವೇಂದ್ರ ಕುಷ್ಟಗಿ, ಡಾ.ರಜಾಕ್ ಉಸ್ತಾದ್, ಚಂದ್ರಗಿರೀಶ್, ಜೆ.ಬಿ.ರಾಜು, ಎಂ.ಆರ್.ಭೇರಿ, ಶಿವಕುಮಾರ ಮ್ಯಾಗಳಮನಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts