ರಾಯಚೂರು: ಹೊಸಮನಿ ಪ್ರಕಾಶನದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಾಶನದ ಅಧ್ಯಕ್ಷ ಬಷೀರ್ ಅಹ್ಮದ್ ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನ.10ರಂದು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಜಿಲ್ಲೆಯ 11 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತರಾದ ಬಸವರಾಜ ಸ್ವಾಮಿ, ಡಿ.ಎಚ್ ಕಂಬಳಿ, ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಸಾಹಿತಿಗಳಾದ ಭಗತರಾಜ್ ನಿಜಾಮಕಾರಿ, ಆಂಜನೇಯ ಜಾಲಿಬೆಂಚಿ, ಸಂಗೀತಗಾರರಾದ ಕೆ.ಕರಿಯಪ್ಪ, ರಘುಪತಿ ಪೂಜಾರ್, ಗಡಿನಾಡ ಕನ್ನಡಿಗರ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್, ಉಪನ್ಯಾಸಕ ಖಾಜಾವಲಿ, ಜಾನಪದ ಗಾಯಕಿಯರಾದ ಹೊಳೆಮ್ಮ, ಹರವಿ ಬಸ್ಸಮ್ಮ ಅವರಿಗೆ ನೃಪತುಂಗಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪರ್ವಿನ್ ಬೇಗಂ ಹೊಸಮನಿ, ರಪೀಕ್ ಅಹ್ಮದ್, ಸಿದ್ದರಾಮಪ್ಪ ಮಾಲಿ ಪಾಟೀಲ್, ಸುರೇಶ ಕುಮಾರ ಸೇರಿದಂತೆ ಇತರರಿದ್ದರು.