ರಾಯಚೂರು: ಜಿಲ್ಲೆಯ ವಿಕಲಚೇತನರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿಯಿಂದ ಎಡಿಸಿ ಶಿವಾನಂದ ಭಜಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಜಿಲ್ಲಾಡಳಿತ ಹಾಗೂ ಪ್ರತಿ ತಾಲೂಕಿನಲ್ಲಿ ಮೂರು ತಿಂಗಳುಗಳಿಗೊಮ್ಮೆ ಅಂಗವಿಕಲರ ಕುಂದುಕೊರತೆ ಸಭೆಯನ್ನು ಕೈಗೊಳ್ಳಬೇಕು. ಅಂಗವಿಕಲರಿಗೆ ಮೀಸಲಿಡಲಾದ ಸ್ಥಳೀಯ ಸಂಸ್ಥೆಗಳಲ್ಲಿನ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಈ ಅನುದಾನದಿಂದ ಅಂಗವಿಕಲರಿಗಾಗಿ ಇರುವ ಯೋಜನೆಗಳನ್ನು ಅವರಿಗೆ ಮುಟ್ಟಿಸಬೇಕು. ಎಲ್ಲ ಕಚೇರಿಗಳಲ್ಲಿ ಅಂಗವಿಕಲರಿಗಾಗಿ ಇರುವ ರ‌್ಯಾಂಪ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು ಎಂದು ಸಮಿತಿಯ ಪ್ರಮುಖರು ಎಡಿಸಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಭಂಡಾರಿ, ಜಿಲ್ಲಾಧ್ಯಕ್ಷ ಎಂಡಿ ಜಾಫರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಅನ್ವರ್, ಪ್ರಮುಖರಾದ ನಾಗರಾಜ್, ರಾಯಪ್ಪ ಸೇರಿದಂತೆ ಇತರರಿದ್ದರು.