ರಾಯಚೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಬುಧವಾರ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಯಿತು.
ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಕೃಷ್ಣ, ಕೆ.ಆಂಜನೇಯ್ಯ, ಮಹಾಂತೇಶ ಬಿರಾದಾರ ಕಣದಲ್ಲಿದ್ದರು. ಕೃಷ್ಣ 43 ಮತಗಳನ್ನು ಪಡೆದು ಜಯಗಳಿಸಿದರೆ, ಮಹಾಂತೇಶ 22 ಮತಗಳು ಆಂಜನೇಯ್ಯ 6 ಮತಗಳನ್ನು ಪಡೆದು ಸೋತರು.
ಖಜಾಂಚಿ ಸ್ಥಾನಕ್ಕಾಗಿ ಕಣದಲ್ಲಿದ್ದ ಪ್ರಸನ್ನಕುಮಾರ 45 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಖಲೀಲ 18 ಹಾಗೂ ರಾಜಶೇಖರ್ 08 ಮತಗಳನ್ನು ಪಡೆದಿದ್ದರು.
ರಾಜ್ಯ ಪರಿಷತ್ ಸದಸ್ಯ ಸ್ಥಾನದ ಚುನಾವಣಾ ಅಭ್ಯಾರ್ಥಿಗಳಾದ ಎಹಸಾನ್ ಉಲ್ ಹಕ್ 39 ಮತಗಳನ್ನು ಪಡೆದು ಗೆದ್ದರೆ, ವೆಂಕಟಾಚಲ 23 ಹಾಗೂ ಡಿ.ವೆಂಕಟೇಶ 9 ಮತಗಳನ್ನು ಪಡೆದು ಸೋತರು.
ಫಲಿತಾಂಶವನ್ನು ಚುನಾವಣಾಧಿಕಾರಿ ಭೀಮಣ್ಣ ನಾಯಕ ಘೋಷಿಸಿದರು. ಗೆದ್ದ ಅಭ್ಯರ್ಥಿಗಳ ಪರ ನೌಕರರು ಅಭ್ಯರ್ಥಿಗಳನ್ನು ಹೊತ್ತು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
