ಮೀನುಗಾರರಿಗೆ ಪ್ರಮಾಣಪತ್ರ

<ಸಚಿವ ವೆಂಕಟರಾವ್ ನಾಡಗೌಡ> ಗೋವಾ ಸಿಎಂ ಜತೆ ಎಚ್​ಡಿಕೆ ಚರ್ಚೆ>

ರಾಯಚೂರು
ರಾಜ್ಯದ ಕರಾವಳಿಯಿಂದ ಗೋವಾಕ್ಕೆ ಮೀನು ಸಾಗಣೆ ಮೇಲೆ ನಿಷೇಧ ಹೇರಿರುವ ಕುರಿತಾಗಿ ಅಲ್ಲಿನ ಸಿಎಂ ಜತೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರ್ಚಚಿಸಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ ಎಂದು ಪಶು ಸಂಗೋಪನೆ ಮತ್ತು ಒಳನಾಡು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೀನುಗಾರರಿಗೆ ಸರ್ಕಾರದಿಂದ ಪ್ರಮಾಣಪತ್ರ ನೀಡಲಾಗುತ್ತಿದ್ದು, ಅದನ್ನು ತೆಗೆದುಕೊಂಡು ಮೀನು ಸಾಗಣೆ ಮಾಡಬಹುದು. ಪ್ರಮಾಣ ಪತ್ರ ಪಡೆಯದವರಿಂದ ಸಾಗಣೆಗೆ ಸಮಸ್ಯೆಯಾಗಿದೆ. ಗೋವಾ ಮೀನುಗಾರಿಕೆ ಇಲಾಖೆಯಿಂದ ಸಮಸ್ಯೆಯಾಗಿಲ್ಲ. ಅಲ್ಲಿನ ಆರೋಗ್ಯ ಇಲಾಖೆಯಿಂದ ಸಮಸ್ಯೆ ಎದುರಾಗಿದೆ. ಶೀಘ್ರವೇ ಗೋವಾ ಸಿಎಂಗೆ ಪತ್ರ ಬರೆದು, ಸಮಸ್ಯೆ ಪರಿಹರಿಸಲಾಗುವುದು ಎಂದರು.