ರಾಯಚೂರಲ್ಲಿ ಚಾಕುವಿನಿಂದ ತಿವಿದು ಯುವಕನ ಕೊಲೆ

ರಾಯಚೂರು: ನಗರದ ಗೋಶಾಲ ರಸ್ತೆಯಲ್ಲಿ ಬುಧವಾರ ತಡರಾತ್ರಿ ಯುವಕನಿಗೆ ಚಾಕುವಿನಿಂದ ತಿವಿದು ಕೊಲೆಗೈದ ಸಿಯತಲಾಬ್ ಬಡಾವಣೆಯ ಮಹ್ಮದ್ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಗೋಶಾಲ ರಸ್ತೆಯಲ್ಲಿರುವ ಸ್ವಾಗತ ಫಂಕ್ಷನ್ ಹಾಲ್‌ಬಳಿ ನಡೆದ ಘಟನೆಯಲ್ಲಿ ಮುನೀರ್ ಅಲಿಸಾಬ್( 31) ಕೊಲೆಯಾದ ಯುವಕ. ಘಟನಾ ಸ್ಥಳಕ್ಕೆ ಧಾವಿಸಿದ ಸದರ್ ಬಜಾರ ಠಾಣೆ ಪೊಲೀಸರು ಕೊಲೆ ಆರೋಪಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಹಳೆ ವೈಷಮ್ಯವೇ ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ನಡೆಸಿದ ನಂತರ ಎಲ್ಲವೂ ಹೊರಬರಲಿದೆ ಎಂದು ಠಾಣೆಯ ಪಿಎಸ್‌ಐ ಉಮೇಶ ಕಾಂಬ್ಳೆ ತಿಳಿಸಿದ್ದಾರೆ.