ವೀಕೆಂಡ್ ಕರ್ಫ್ಯೂಗೆ ರಾಯಚೂರು ಸ್ತಬ್ಧ; ವ್ಯಾಪಾರ, ವಹಿವಾಟು ಸ್ಥಗಿತ , ಬಿಕೋ ಎನ್ನುತ್ತಿರುವ ರಸ್ತೆಗಳು, ಜನರ ಓಡಾಟ ವಿರಳ

blank

ರಾಯಚೂರು: ಕರೊನಾ ನಿಯಂತ್ರಿಸಲು ಜಾರಿಗೊಳಿಸಲಾದ ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನಗರದಲ್ಲಿ ಭಾನುವಾರ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದು, ವಾಹನ ಸಂಚಾರವಿಲ್ಲದೆ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ನಗರದಲ್ಲಿ ಶನಿವಾರ ಅಲ್ಪಮಟ್ಟಿಗೆ ಜನ ರಸ್ತೆಗಿಳಿದಿದ್ದರು. ಆದರೆ, ಭಾನುವಾರ ಮನೆ ಬಿಟ್ಟು ಹೊರಬಂದಿರಲಿಲ್ಲ. ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಕಂಡು ಬರುತ್ತಿತ್ತು. ಜನರ ಓಡಾಟವೂ ತೀರಾ ವಿರಳವಾಗಿತ್ತು. ಬೆಳಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ ಅಂಗಡಿಗಳ ಮುಂದೆ ಹೆಚ್ಚಿನ ಜನ ಸಂದಣಿ ಕಂಡುಬರಲಿಲ್ಲ. ನಂತರದಲ್ಲಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ ವಾಹನಗಳನ್ನು ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುತ್ತಿರುವವರಿಗೆ ದಂಡವನ್ನೂ ವಿಧಿಸಿದರು.

ವೀಕೆಂಡ್ ಕರ್ಫ್ಯೂಗೆ ರಾಯಚೂರು ಸ್ತಬ್ಧ; ವ್ಯಾಪಾರ, ವಹಿವಾಟು ಸ್ಥಗಿತ , ಬಿಕೋ ಎನ್ನುತ್ತಿರುವ ರಸ್ತೆಗಳು, ಜನರ ಓಡಾಟ ವಿರಳ
ವೀಕೆಂಡ್ ಕರ್ಫ್ಯೂಗೆ ರಾಯಚೂರು ಸ್ತಬ್ಧ; ವ್ಯಾಪಾರ, ವಹಿವಾಟು ಸ್ಥಗಿತ , ಬಿಕೋ ಎನ್ನುತ್ತಿರುವ ರಸ್ತೆಗಳು, ಜನರ ಓಡಾಟ ವಿರಳ 3

ಪ್ರಯಾಣಿಕರ ಕೊರತೆ: ವೀಕೆಂಡ್ ಕರ್ಫ್ಯೂ ವಿಧಿಸಿದ್ದರೂ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಯಾವುದೇ ಅಡೆತಡೆಗಳಿಲ್ಲ. ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳಿದ್ದರೂ ಪ್ರಯಾಣಿಕರ ಕೊರತೆಯಿಂದಾಗಿ ಹಲವು ಮಾರ್ಗಗಳ ಸಂಚಾರ ರದ್ದುಗೊಳಿಸಲಾಯಿತು. ದೂರದ ಊರುಗಳ ಪ್ರಯಾಣಿಕರು ಮಾತ್ರ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಪ್ರಯಾಣಿಕರ ಕೊರತೆಯಿಂದಾಗಿ ಖಾಸಗಿ ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅಕ್ರಮ ಮಾಂಸ ಮಾರಾಟ: ಮಹಾವೀರ ಜಯಂತಿ ನಿಮಿತ್ತ ಮಾಂಸ ಮಾರಾಟ ನಿಷೇಧವಿದ್ದರೂ ನಗರದ ಹಲವೆಡೆ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿತ್ತು. ಮಟನ್ ಮಾರ್ಕೆಟ್‌ನಲ್ಲಿ ಅಂಗಡಿಗಳ ಶಟರ್ ಅರ್ಧ ತೆರೆದು ಮಾಂಸ ಮಾರಾಟ ಮಾಡಲಾಗುತ್ತಿತ್ತು. ಸದರ್ ಬಜಾರ್ ಠಾಣೆ ಕೂಗಳತೆಯಲ್ಲಿರುವ ಮಟನ್ ಮಾರ್ಕೆಟ್‌ನಲ್ಲಿ ಮಾಂಸ ಮಾರಾಟ ನಡೆಯುತ್ತಿದ್ದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂಗೆ ರಾಯಚೂರು ಸ್ತಬ್ಧ; ವ್ಯಾಪಾರ, ವಹಿವಾಟು ಸ್ಥಗಿತ , ಬಿಕೋ ಎನ್ನುತ್ತಿರುವ ರಸ್ತೆಗಳು, ಜನರ ಓಡಾಟ ವಿರಳ
ಮಹಾವೀರ ಜಯಂತಿ ನಿಮಿತ್ತ ಮಾಂಸ ಮಾರಾಟ ನಿಷೇಧವಿದ್ದರೂ ರಾಯಚೂರಿನ ಮಟನ್ ಮಾರ್ಕೆಟ್‌ನಲ್ಲಿ ಮಾಂಸ ಮಾರಾಟ ಮಾಡುತ್ತಿರುವುದು.

ಸವಾರರ ಅನಗತ್ಯ ತಿರುಗಾಟ

ಮಾನ್ವಿ: ಎರಡನೇ ದಿನದ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಗ್ರಾಮಿಣ ಜನರು ಆಸ್ಪತ್ರೆ, ಇತರೆ ಕೆಲಸಗಳಿಗೆ ಬೈಕ್ ಮೂಲಕ ಪಟ್ಟಣಕ್ಕೆ ಬಂದು ಖರೀದಿ ಮಾಡಿ ಮಾಡಿ ಹೋಗುವ ದೃಶ್ಯಗಳು ಕಂಡು ಬಂದವು. ಪಟ್ಟಣದ ಬಸವವೃತ್ತ, ವಾಲ್ಮೀಕಿ ವೃತ್ತದಲ್ಲಿ ಬೆಳಗ್ಗೆ 11ರ ನಂತರ ಅನಗತ್ಯವಾಗಿ ತಿರುಗಾಡುವ ಸವಾರರನ್ನು ಪೊಲೀಸರು ತಡೆದು, ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೊರತು ಪಡಿಸಿ ಬೇರೆ ಯಾರಾದರೂ ಇದ್ದರೆ ಅಂಥವರನ್ನು ಪೊಲೀಸರು ಮನೆಗೆ ಕಳಿಸುವ ದೃಶ್ಯಗಳು ಸಾಮಾನ್ಯವಾಗಿತ್ತು.

Share This Article

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…

ಬಿಸಿ ಮಾಡದೆ ಹಾಲನ್ನು ಹಸಿಯಾಗಿ ಕುಡಿಯಲೇಬಾರದು! Raw Milkನಿಂದಾಗುವ ಸಮಸ್ಯೆ ಎದುರಿಸೋಕೆ ರೆಡಿಯಾಗಿ!

Raw Milk : ಗ್ರಾಮೀಣ ಪ್ರದೇಶದ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ…