ದುಡಿಯುವ ಜನರ ಹಕ್ಕುಗಳ ಮೇಲೆ ದಾಳಿ: AIUTUC ರಾಜ್ಯಾಧ್ಯಕ್ಷ ಸೋಮಶೇಖರ್ ಆಕ್ರೋಶ

blank

ರಾಯಚೂರು: ದುಡಿಯುವ ಜನರು ಸೇವಾ ಭದ್ರತೆಯನ್ನು ಕಳೆದುಕೊಂಡು ಉದ್ಯೋಗ ಮತ್ತು ಬದುಕಿನ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ)ನ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲೆಯ 2ನೇ ಕಾರ್ಮಿಕ ಸಮ್ಮೇಳನವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಇದನ್ನೂ ಓದಿ: ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನ

ಆಳುವ ವರ್ಗವು ದುಡಿಯುವ ಜನರ ಹಕ್ಕುಗಳ ಮೇಲೆ ದಾಳಿಯನ್ನೆಸಗುತ್ತಿದೆ. ವಿಶ್ವಾದ್ಯಂತ ಕಾರ್ಮಿಕರು ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದ ಹಕ್ಕುಗಳ ಮೇಲೆ ದಾಳಿ ನಡೆದಿದೆ ಎಂದರು.

ದಿನಕ್ಕೆ 8 ತಾಸು ದುಡಿಯುವ ಅವಧಿಯನ್ನು ಹೆಚ್ಚಿಸುವುದು, ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ತೆಗೆದುಹಾಕುವ ಹುನ್ನಾರ ನಡೆದಿದೆ. ಆದ್ದರಿಂದ ಕಾರ್ಮಿಕರ ಹಕ್ಕುಗಳ ದಮನದ ವಿರುದ್ಧ ಬಲಿಷ್ಠ ಐಕ್ಯ ಹೋರಾಟ ಕಟ್ಟಲು ಕಾರ್ಮಿಕರು ಮುಂದಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಕಾರ್ಮಿಕರ ಹಿತಾಸಕ್ತಿ ಮರೆತ ಸರ್ಕಾರಗಳು – ಸೋಮಶೇಖರ್ ವಿಷಾಧ -ಎಐಯುಟಿಯುಸಿಯ ಪ್ರಥಮ ಜಿಲ್ಲಾ ಸಮ್ಮೇಳನ 

ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ಕಡಿತ, ಬಡತನ ಸಮಸ್ಯೆಗಳು ಏಕೆ ಬರುತ್ತಿದೆ. ಅದರ ಮೂಲ ತಿಳಿದುಕೊಂಡು, ಮಾಲೀಕರ ಲಾಭ ಗರಿಷ್ಠ ಲಾಭಕ್ಕೆ ಕಾರಣವಾದ ಹಾಗೂ ಕಾರ್ಮಿಕರ ಶೋಷಣೆಗೆ ಕಾರಣವಾದ ಬಂಡವಾಳ ಶಾಹಿ ವ್ಯವಸ್ಥೆ ಕೊನೆಗಣಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎನ್.ಎಸ್‌ವಿರೇಶ್ ಎನ್‌ಎಸ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಯಶಸ್ವಿ ಕಾರ್ಮಿಕರ ಚಳುವಳಿಯನ್ನು ಕಟ್ಟಿ ಬೆಳೆಸಲಾಗಿದೆ. ಕಾರ್ಮಿಕ ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಲು ಹಾಗೂ ಬಲಪಡಿಸಲು, ಜಿಲ್ಲೆಯ ಸಮಸ್ತ ದುಡಿಯುವ ಜನರ ಸಮಸ್ಯೆಗಳ ವಿರುದ್ಧ ಸಂಘಟಿತ ಬಲಿಷ್ಠ ಹೋರಾಟವನ್ನು ಬೆಳೆಸುವ ದಿಕ್ಕಿನಲ್ಲಿ ಕಾರ್ಮಿಕರನ್ನು ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಜಾಗೃತಗೊಳಿಸಲು ಸಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್, ಪ್ರಮುಖರಾದ ಮಹೇಶ್ ಚೀಕಲ್ ಪರ್ವಿ, ಅಣ್ಣಪ್ಪ, ಈರಮ್ಮ, ಸಲೀಮ್, ಯಲ್ಲಪ್ಪ, ಗಾಯತ್ರಿ ಸೇರಿದಂತೆ ಇತರರಿದ್ದರು.

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…