ರಸ್ತೆ ಅಪಘಾತ: ಇಬ್ಬರು ಬೈಕ್​ ಸವಾರರು ಸಾವು

ರಾಯಚೂರು: ಬಸ್​ ನಿಲ್ದಾಣಕ್ಕೆ ಬೈಕ್​ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಯಚೂರು ತಾಲೂಕು ಮಲಿಯಬಾದ್​ ಜೆಸ್ಕಾ ಎಂಬಲ್ಲಿ ಘಟನೆ ನಡೆದಿದ್ದು, ಬೀದರ್​​ ಮೂಲದ ಸತ್ತಾರ್, ಅಜಯ್​ಕುಮಾರ್ ಮೃತರೆಂದು ತಿಳಿದು ಬಂದಿದೆ. ಇವರು ಬೆಂಗಳೂರಿನಿಂದ ಬೀದರ್​ಗೆ ತೆರಳುತ್ತಿದ್ದರು.

ಚಾಲಕನ ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿದ್ದ ಬಸ್ ನಿಲ್ದಾಣಕ್ಕೆ ಡಿಕ್ಕಿ ನಡೆದು ಅವಘಡ ಸಂಭವಿಸಿದೆ. ಯರಗೇರಾ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)