ಹುಬ್ಬರವಾಡಿ ಗ್ರಾಪಂಗೆ ಸತ್ಯವ್ವ ಅಧ್ಯಕ್ಷೆ

ರಾಯಬಾಗ: ತಾಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಹಾಗೂ ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಬೆಂಬಲಿತ ಅಭ್ಯರ್ಥಿ ಸತ್ಯವ್ವ ಧರೆಪ್ಪ ಬಿರನಾಳೆ ಅವರನ್ನು ಶುಕ್ರವಾರ ಅವಿರೋಧ ಆಯ್ಕೆ ಮಾಡಲಾಯಿತು.

ಅಧ್ಯಕ್ಷೆ ಲಕ್ಷ್ಮೀಬಾಯಿ ಭರಮಾ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸತ್ಯವ್ವ ಬಿರನಾಳೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಚುನಾವಣಾಧಿಕಾರಿ, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಎಂ.ಬಿ.ಪಾಟೀಲ ಅವಿರೋಧ ಆಯ್ಕೆ ಮಾಡಿದರು.

ಧರೆಪ್ಪ ಬಿರನಾಳೆ, ಲಕ್ಷ್ಮಣ ಪೂಜಾರಿ, ಶಂಕರ ಡಬ್ಬನ್ನವರ, ಗಂಗಾಧರ ಕೋಟ್ರೆ, ಅಣ್ಣಾಸಾಬ ಪಾಟೀಲ, ಚಿದಾನಂದ ಡಬ್ಬನ್ನವರ, ನವಲಪ್ಪ ಲಟ್ಟೆ, ಶಿವಾಜಿ ಶ್ರೀಖಂಡೆ, ಸಿದ್ದಪ್ಪ ಸಿಂದಿಮರದ, ಸಂಜು ಪಾಟೀಲ, ಅಣ್ಣಪ್ಪ ಬಡೋದೆ, ನಿಂಗಪ್ಪ ಪಾಟೀಲ, ಪಿಡಿಒ ಮಂಜುನಾಥ ಡೊಳ್ಳಿ, ಭಗವಂತ ಮಸಾಲಜಿ ಮತ್ತಿತರರಿದ್ದರು.