ಬಿಹಾರ: ಬಿಹಾರ ರಾಜ್ಯ ಚುನಾವಣೆಗೆ ಮುನ್ನ, ಮಹಿಳಾ ಮತದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಒಂದು ವಿಶಿಷ್ಟ ಉಪಕ್ರಮವನ್ನು ಪ್ರಾರಂಭಿಸಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ, ಪಕ್ಷವು ರಾಜ್ಯಾದ್ಯಂತ ಐದು ಲಕ್ಷ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಿದೆ ನಿರ್ಧರಿಸಿದೆ ಎಂಬ ಸುದ್ದಿ ಸಂಚಲನ ಸೃಷ್ಠಿಸುತ್ತಿದ್ದಂತೆ, ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
FAKE है सैनिटरी पैड पर राहुल गांधी की तस्वीर वाला वीडियो
इस वीडियो में जानें हकीकत 👇 pic.twitter.com/q8aCaVunnN
— Congress (@INCIndia) July 5, 2025
ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ‘ಪರಾರಿಯಾದ ಆರ್ಥಿಕ ಅಪರಾಧಿ’; ದೆಹಲಿ ಕೋರ್ಟ್| sanjay-bhandari
ವೈರಲ್ ಆಗಿರುವ ಈ ವಿಡಿಯೋದಲ್ಲಿ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಅನ್ನು ಅನ್‌ಬಾಕ್ಸ್ ಮಾಡಲಾಗುತ್ತಿದ್ದು, ಪ್ಯಾಡ್‌ನ ಒಳಭಾಗದಲ್ಲಿ ರಾಹುಲ್ ಗಾಂಧಿಯವರ ಚಿತ್ರ ಮುದ್ರಿಸಲಾಗಿರುವುದು ಕಂಡುಬಂದಿದೆ. ವಿಡಿಯೋದ ಸತ್ಯವನ್ನು ಕಾಂಗ್ರೆಸ್ ಪರಿಶೀಲಿಸಿದ್ದು, ಅದನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ಹೇಳಿದ್ದೇನು?
चोर चोरी से जाए हेराफेरी से ना जाए, प्रचारमंत्री जी खुद तो फेक वीडियो बनाने को लेकर ज्ञान देते है और उनकी ट्रोल आर्मी इस तरह के घिनौने फेक वीडियो बना कर बिहार में गंदा प्रोपगेंडा चला रही है! pic.twitter.com/Rs6NImE0x6
— Pawan Khera 🇮🇳 (@Pawankhera) July 5, 2025
ಈ ವೈರಲ್ ವಿಡಿಯೋ ಬಗ್ಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ ಪ್ರತಿಕ್ರಿಯಿಸಿದ್ದು, ಬಾಕ್ಸ್ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಚಿತ್ರವಿದೆ. ವಿತರಣೆಯಲ್ಲಿ ನಮಗೆ ಸಹಾಯ ಮಾಡುತ್ತಿರುವ ನಮ್ಮ ಶಾಸಕರು, ಸಹೋದರರು, ತಂದೆಯರ ಚಿತ್ರವಿರುತ್ತದೆ. ಅವರ ವೈಫಲ್ಯವನ್ನು ಮರೆಮಾಡಲು, ರಾಹುಲ್ ಗಾಂಧಿ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
(ಏಜೆನ್ಸೀಸ್)
ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ; ಸುಮೋಟೋ ಕೇಸ್ ದಾಖಲು| sumoto-case