ರಾಹುಲ್​ಗೆ ಚುನಾವಣಾ ಸಿಹಿ-ಕಹಿ: ಅಮೇಠಿ ನಾಮಪತ್ರ ಸಿಂಧು

Latest News

ಪ್ರಾಣಾಯಾಮದಲ್ಲಿ ಮುದ್ರೆಗಳ ಅಭ್ಯಾಸದಿಂದ ಕುಂಡಲಿನೀ ಶಕ್ತಿಯ ಉದ್ದೀಪನ

ಪ್ರಾಣಾಯಾಮ ಅಭ್ಯಾಸದ ವೇಳೆ ವಿವಿಧ ಮುದ್ರೆಗಳನ್ನು ಬಳಸಲಾಗುತ್ತದೆ. ಮುದ್ರೆ ಎಂದರೇನು? ಮುದ ನೀಡುವುದು ಯಾವುದು ಅದೇ ಮುದ್ರಾ ಎನ್ನುವುದು ಈ ಪದದ ವ್ಯಾಖ್ಯೆ. ಮುದ್ರೆಗಳು ಆರೋಗ್ಯಕ್ಕೆ...

ನೀವು ನರ್ಸರಿ ಮಾಡಲು ನಿರ್ಧರಿಸಿದ್ದೀರಾ? ಇಲ್ಲಿದೆ ನೋಡಿ ಮಣ್ಣು ತುಂಬಲು ಸರಳ ಸಾಧನ

ಕಾಳುಮೆಣಸು, ಅಡಕೆ, ಅಲಂಕಾರಿಕ ಹೂವಿನ ಗಿಡ ಇಂಥ ಬಹುಬೇಡಿಕೆಯುಳ್ಳ ಸಸಿಗಳ ನರ್ಸರಿ ಮಾಡಲು ನಿರ್ಧರಿಸಿದ್ದರೆ, ಸಾವಿರಾರು ಕವರ್​ಗಳಿಗೆ ಮಣ್ಣು ತುಂಬುವುದು ಹೇಗಪ್ಪ ಎಂದು ಚಿಂತಿಸುತ್ತಿರಬಹುದು. ಅಂಥವರಿಗೆಲ್ಲ...

ಉಮಾಶಂಕರ ಗಡಿಪಾರಿಗೆ ಒತ್ತಾಯಿಸಿ ಪ್ರತಿಭಟನೆ

ಚಡಚಣ: ಡಾ.ಬಿ.ಆರ್. ಅಂಬೇಡ್ಕರರು ಸಂವಿಧಾನ ಬರೆದಿಲ್ಲ ಎಂದು ಅವಹೇಳನಕಾರಿಯಾಗಿ ಪ್ರಕಟಿಸಿದ್ದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಮನ್ವಯ ತಾಲೂಕು ಸಮಿತಿ ವತಿಯಿಂದ ಶನಿವಾರ...

ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ- ಇಂದಿನ ಇಂಗ್ಲಿಷ್ ಪದಗಳು

Burrow (ಬರೋ) = ಹುಡುಕಾಡು ತನ್ನ ಕಾರ್​ನ ಚಾವಿಯ ಯಥಾಪ್ರತಿಗಾಗಿ ಆತ ಡ್ರಾವರ್​ನಲ್ಲಿದ್ದ ವಸ್ತುಗಳನ್ನು ಅಡಿಮೇಲಾಗಿಸಿ ಹುಡುಕಾಡಿದ. He burrowed through the things in the...

ಇಸ್ರೋ ಅಧ್ಯಕ್ಷ ಡಾ.ಕೆ ಶಿವನ್ ಮತ್ತು ನಿಖಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್​ಗೆ ಸುವರ್ಣಶ್ರೀ ಪ್ರಶಸ್ತಿ

ಬೆಂಗಳೂರು: ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ಪ್ರಸಕ್ತ ಸಾಲಿನ ‘ಸುವರ್ಣಶ್ರೀ’ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಕೆ. ಶಿವನ್...

ನವದೆಹಲಿ/ಅಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋಮವಾರ ಸಿಹಿ-ಕಹಿಯ ದಿನವಾಗಿದೆ. ಲೋಕಸಭಾ ಕ್ಷೇತ್ರ ಅಮೇಠಿಯಿಂದ ಚುನಾವಣಾಧಿಕಾರಿ ಸಿಹಿ ಸುದ್ದಿ ನೀಡಿದ್ದರೆ, ಸುಪ್ರೀಂ ಕೋರ್ಟ್​ನಿಂದ ಕಹಿ ಸುದ್ದಿ ಬಂದಿದೆ.

ರಾಹುಲ್ ನಾಮಪತ್ರ ವಜಾಗೊಳಿಸಬೇಕು ಎಂದು ಪಕ್ಷೇತರ ಅಭ್ಯರ್ಥಿಗಳು ಸಲ್ಲಿಸಿದ್ದ ದೂರನ್ನು ವಜಾಗೊಳಿಸಿರುವ ಚುನಾವಣಾಧಿಕಾರಿ, ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ. ಆದರೆ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸುಪ್ರೀಂ ಕೋರ್ಟ್ ‘ಚೌಕಿದಾರ್ ಚೋರ್ ಹೈ’ ಎಂದು ಅನುಮೋದಿಸಿದೆ ಎಂಬ ಹೇಳಿಕೆಗೆ ರಾಹುಲ್ ವಿಷಾದವ್ಯಕ್ತಪಡಿಸಿದ್ದಾರೆ.

ನಾಮಪತ್ರ ಅಂಗೀಕಾರ: ರಾಹುಲ್ ನಾಮಪತ್ರದಲ್ಲಿನ ಮಾಹಿತಿ ಬಗ್ಗೆ ನಾಲ್ವರು ಅಭ್ಯರ್ಥಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸೋಮವಾರ ವಿಚಾರಣೆ ನಡೆಸಿದರು. ರಾಹುಲ್ ಪರ ವಕೀಲರ ವಾದ ಆಲಿಸಿದ ಚುನಾವಣಾಧಿಕಾರಿ, ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾಮಪತ್ರ ತಿರಸ್ಕರಿಸಲು ಪೂರಕ ದಾಖಲೆಗಳು ಕೂಡ ಇಲ್ಲ. ಹೀಗಾಗಿ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಿ, ರಾಹುಲ್ ನಾಮಪತ್ರಕ್ಕೆ ಹಸಿರು ನಿಶಾನೆ ತೋರಲಾಗಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ನಾಗರಿಕತ್ವ, ಪ್ರಮಾಣಪತ್ರ ಹಾಗೂ ಕಂಪನಿ ವಿವರಗಳ ಕುರಿತು ಸಲ್ಲಿಸಿದ್ದ ಆಕ್ಷೇಪಣೆಗೆ ರಾಹುಲ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಪರ ವಕೀಲ, ‘ರಾಹುಲ್ ಭಾರತದಲ್ಲಿಯೇ ಜನಿಸಿದ್ದಾರೆ. ಈ ದೇಶದ ಪಾಸ್​ಪೋರ್ಟ್ ಹೊಂದಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಭಾರತದ ನಾಗರಿಕರಲ್ಲದವರಿಗೆ ಮತದಾನದ ಗುರುತಿನ ಚೀಟಿ ನೀಡುವುದಿಲ್ಲ. ರಾಹುಲ್ ಬಳಿ ಮತದಾನದ ಗುರುತಿನ ಚೀಟಿಯಿದ್ದು, ಬೇರೆ ಯಾವುದೇ ದೇಶದ ನಾಗರಿಕತ್ವವನ್ನು ಅವರು ಹೊಂದಿಲ್ಲ. ಭಾರತದಲ್ಲಿ ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಲ್ ವಿಂಚಿ ಯಾರು, ಆ ಪ್ರಮಾಣಪತ್ರದ ಬಗ್ಗೆ ನಮಗೆ ಮಾಹಿತಿಯಿಲ್ಲ. ರಾಹುಲ್​ಗೆ ಸೇರಿದ ಅಧಿಕೃತ ಪ್ರಮಾಣಪತ್ರವನ್ನು ಚುನಾವಣಾಧಿಕಾರಿಗೆ ನೀಡಿದ್ದೇವೆ. ಇನ್ನು ಬ್ರಿಟನ್​ನಲ್ಲಿ ರಾಹುಲ್ ಆರಂಭಿಸಿದ್ದ ಕಂಪನಿಯನ್ನು 2009ರಲ್ಲಿ ಮುಚ್ಚಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸಿ ಅವರು ನಾಮಪತ್ರ ಪುರಸ್ಕರಿಸಿದ್ದಾರೆ’ ಎಂದು ವಕೀಲರು ತಿಳಿಸಿದ್ದಾರೆ. ಇದರೊಂದಿಗೆ ರಾಹುಲ್ ನಾಮಪತ್ರ ವಿವಾದ ಅಂತ್ಯಗೊಂಡಂತಾಗಿದೆ. ವಯನಾಡಿನಲ್ಲೂ ಇದೇ ರೀತಿಯ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಇದೇ ಆದೇಶ ಬರುವ ಸಾಧ್ಯತೆಯಿದೆ.

ದೂರಿನಲ್ಲೇನಿತ್ತು?

# ರಾಹುಲ್ ಗಾಂಧಿ ಎಂಫಿಎಲ್ ಪ್ರಮಾಣಪತ್ರದಲ್ಲಿ ರಾಲ್ ವಿಂಚಿ ಎಂದು ಹೆಸರಿದೆ.

# ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಅಲ್ಲಿಯ ನಾಗರಿಕತ್ವ ಹೊಂದಿದ್ದಾರೆ ಎಂಬ ಮಾಹಿತಿಯಿದೆ.

# ಬ್ರಿಟನ್ ಕಂಪನಿಯ ಆರ್ಥಿಕ ವ್ಯವಹಾರವನ್ನು ಹಿಂದಿನ ಪ್ರಮಾಣಪತ್ರಗಳಲ್ಲಿ ಮುಚ್ಚಿಟ್ಟಿದ್ದಾರೆ.

ಕಮಲ ಚಿಹ್ನೆ ಹೊತ್ತ ಚೌಕಿದಾರ್ ಚೋರ್ ಎನ್ನುವುದು ಮೇ 23ಕ್ಕೆ ಜನತಾ ನ್ಯಾಯಾಲಯದಲ್ಲಿ ನಿರ್ಣಯವಾಗಲಿದೆ. ಖಂಡಿತ ನ್ಯಾಯ ಸಿಗಲಿದೆ. ಬಡವರಿಂದ ಲೂಟಿ ಮಾಡಿ ಶ್ರೀಮಂತ ಸ್ನೇಹಿತರಿಗೆ ಲಾಭ ಮಾಡಿಕೊಡುವ ಚೌಕಿದಾರರಿಗೆ ಶಿಕ್ಷೆಯಾಗಲಿದೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಪ್ರಚಾರದ ಭರಾಟೆಯಲ್ಲಿ ರಾಹುಲ್ ಹೇಳಿಕೆ ನೀಡಿಲ್ಲ. ಮಾಧ್ಯಮದ ಜತೆಗೆ ಮಾತನಾಡುವಾಗ ನೀಡಿರುವ ಹೇಳಿಕೆಯದು. ಈ ಕುರಿತು ಮಂಗಳವಾರ ಕೋರ್ಟ್​ನಲ್ಲಿ ವಾದ ಮಂಡಿಸುತ್ತೇವೆ. ಒಟ್ಟಿನಲ್ಲಿ ತಪು್ಪ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

| ಮೀನಾಕ್ಷಿ ಲೇಖಿ ಬಿಜೆಪಿ ಸಂಸದೆ

ಹೇಳಿಕೆ ಹಿಂಪಡೆದ ರಾಹುಲ್

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಆದೇಶವನ್ನು ‘ಚೌಕಿದಾರ್ ನರೇಂದ್ರ ಮೋದಿ ಚೋರ್ ಹೈ’ ಎಂಬ ಹೇಳಿಕೆಗೆ ಸಮೀಕರಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ವಿಷಾದವ್ಯಕ್ತಪಡಿಸಿದ್ದಾರೆ. ರಾಹುಲ್ ಹೇಳಿಕೆ ವಿರೋಧಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿಗೆ ಸಂಬಂಧಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ‘ಚುನಾವಣಾ ಪ್ರಚಾರ ತಾರಕಕ್ಕೇರಿದ್ದ ವೇಳೆ ನೀಡಿರುವ ಹೇಳಿಕೆಯನ್ನು ವಿರೋಧ ಪಕ್ಷಗಳು ದುರ್ಬಳಕೆ ಮಾಡುತ್ತಿವೆ. ಸುಪ್ರೀಂಕೋರ್ಟ್ ಕೂಡ ‘ಚೌಕಿದಾರ್ ಚೋರ್ ಹೈ’ ಎಂಬುದನ್ನು ಒಪ್ಪಿಕೊಂಡಿದೆ ಎಂಬ ನನ್ನ ಹೇಳಿಕೆಯನ್ನು ವಿರೋಧಿಗಳು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ಯಾವುದೇ ಉದ್ದೇಶ ನನ್ನ ಮನದಲ್ಲಿ ಇಲ್ಲ’ ಎಂದು ರಾಹುಲ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ‘ಚುನಾವಣಾ ಪ್ರಚಾರದ ಭರಾಟೆಯಲ್ಲಿದ್ದ ಕಾರಣ ಸುಪ್ರೀಂಕೋರ್ಟ್ ಏ.10ರಂದು ನೀಡಿದ ಆದೇಶವನ್ನು ನಾನು ಓದಿರಲಿಲ್ಲ. ಸವೋಚ್ಚ ನ್ಯಾಯಾಲಯವನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವುದು ಅಥವಾ ಅದರ ಪ್ರಕ್ರಿಯೆಗಳಿಗೆ ಅಡ್ಡಿ ಮಾಡುವ ಉದ್ದೇಶ ಇಲ್ಲ’ ಎಂದಿದ್ದಾರೆ.

ರಾಹುಲ್ ಹೇಳಿಕೆ ಏನು?

‘ವಾಯಪಡೆ ಹಣವನ್ನು ಅನಿಲ್ ಅಂಬಾನಿಗೆ ನೀಡಿರುವ ‘ಚೌಕಿದಾರ್ ಮೋದಿ ಚೋರ್ ಹೈ’ ಎಂದು ತಿಂಗಳುಗಳಿಂದ ಹೇಳುತ್ತಿದ್ದೇನೆ. ಸುಪ್ರೀಂಕೋರ್ಟ್ ಸಹ ಇದನ್ನು ಒಪ್ಪಿರುವುದು ಸಂತಸ ತಂದಿದೆ. ಈಗ ನಡೆಯುವ ತನಿಖೆಯಿಂದ ಮೋದಿ ಹಾಗೂ ಅನಿಲ್ ಅಂಬಾನಿಯ ಸತ್ಯ ಹೊರಬೀಳಲಿದೆ. ಅವರು ಬಚಾವಾಗಲು ಸಾಧ್ಯವೇ ಇಲ್ಲ’ ಎಂದು ರಾಹುಲ್ ಹೇಳಿದ್ದರು.

ನ್ಯಾಯಾಂಗ ನಿಂದನೆ ಅರ್ಜಿ

ವೈಯಕ್ತಿಕ ಆಕ್ಷೇಪಗಳನ್ನು ಸುಪ್ರೀಂಕೋರ್ಟ್ ಆದೇಶಕ್ಕೆ ತಳುಕು ಹಾಕುವ ಮೂಲಕ ಕೋರ್ಟ್ ಪ್ರಕ್ರಿಯೆಯಲ್ಲಿ ರಾಹುಲ್ ಮೂಗು ತೂರಿಸುತ್ತಿದ್ದಾರೆ ಎಂದು ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಹುಲ್ ಗಾಂಧಿಯಿಂದ ಸುಪ್ರೀಂಕೋರ್ಟ್ ವಿವರಣೆ ಬಯಸಿತ್ತು. ರಾಹುಲ್ ಪ್ರಮಾಣಪತ್ರ ಆಧರಿಸಿ ಮಂಗಳವಾರ ವಿಚಾರಣೆ ನಡೆಯಲಿದ್ದು, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ತೀರ್ವನವಾಗಲಿದೆ.

ದೆಹಲಿ ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟ

ದೆಹಲಿಯ ಏಳು ಕ್ಷೇತ್ರಗಳ ಪೈಕಿ ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಮಾಜಿ ಸಿಎಂ ಹಾಗೂ ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿಯಿಂದ ಸ್ಪರ್ಧಿಸಲಿದ್ದಾರೆ. ಜೆ.ಪಿ. ಅಗರ್ವಾಲ್​ಗೆ ಪ್ರತಿಷ್ಠಿತ ಕೇಂದ್ರ ದೆಹಲಿಯ ಚಾಂದನಿಚೌಕ್​ನಿಂದ ಟಿಕೆಟ್ ಘೋಷಿಸಲಾಗಿದೆ. ನವದೆಹಲಿಯಿಂದ ಅಜಯ್ ಮಾಕೇನ್, ಪೂರ್ವ ದೆಹಲಿಯಿಂದ ಮಾಜಿ ಸಚಿವ ಅರ್​ವಿಂದರ್ ಸಿಂಗ್ ಲವ್ಲಿ, ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಅವರನ್ನು ಕಣಕ್ಕಿಳಿಸಲಾಗಿದೆ. ದಕ್ಷಿಣ ದೆಹಲಿ ಅಭ್ಯರ್ಥಿಯನ್ನು ಇನ್ನಷ್ಟೇ ಘೋಷಿಸಬೇಕಿದ್ದು, ಈ ಸ್ಥಾನಕ್ಕಾಗಿ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಹೆಸರು ಕೇಳಿ ಬಂದಿದೆ. ದೆಹಲಿಗೆ ಸೀಮಿತವಾಗಿ ಆಪ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ಯತ್ನ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ಉ.ಪ್ರದಲ್ಲಿ ಗಾಂಧಿ ಕುಟುಂಬ ಪ್ರಚಾರ

ಅಮೇಠಿ ಹಾಗೂ ರಾಯಬರೇಲಿಯಲ್ಲಿ ಪ್ರಾಬಲ್ಯ ಮುಂದುವರಿ ಸಲು ಹೋರಾಡುತ್ತಿರುವ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಸೋಮವಾರ ಪ್ರತ್ಯೇಕ ಪ್ರಚಾರ ನಡೆಸಿ ದರು. ನಾಮಪತ್ರ ಸಲ್ಲಿಕೆ ಬಳಿಕ ಮೊದಲ ಬಾರಿಗೆ ಸೋನಿಯಾ ರಾಯಬರೇಲಿಗೆ ಭೇಟಿ ನೀಡಿದರೆ, ರಾಹುಲ್ ಹಾಗೂ ಪ್ರಿಯಾಂಕಾ ಎರಡೂ ಕ್ಷೇತ್ರಗಳಲ್ಲಿ ಪ್ರತ್ಯೇಕ ಪ್ರಚಾರ ಸಭೆ ನಡೆಸಿ ದರು. ಬಹುತೇಕ ಎಲ್ಲ ಸಭೆಗಳಲ್ಲೂ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆಯ ಮೂಲಕವೇ ರಾಹುಲ್ ಪ್ರಚಾರ ನಡೆಸಿದರು.

ಪಾಕ್ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ನಾಯಕರು ಪದೇಪದೆ ಸಾಕ್ಷ್ಯಗಳನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಹಕ್ಕೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕು. ಆಗ ಅವರಿಗೆ ಸತ್ಯದ ಅರಿವಾಗುತ್ತದೆ.

| ಪಂಕಜಾ ಮುಂಡೆ ಮಹಾರಾಷ್ಟ್ರ ಸಚಿವೆ

ನಟಿ ಜಯಪ್ರದಾ ವಿರುದ್ಧ ದೂರು ದಾಖಲು

ಲಖನೌ: ನಟಿ ಹಾಗೂ ರಾಮ್ುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ತನ್ನ ಒಳ ಉಡುಪಿನ ಬಗ್ಗೆ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಆಜಂ ಖಾನ್ ಬಗ್ಗೆ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಸ್ತಾಪಿಸಿದ್ದ ಜಯಪ್ರದಾ, ಅವರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಸಲಹೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನೀವು ಆಜಂ ಖಾನ್ ಜತೆಗಿರುವಾಗ ಎಕ್ಸ್​ರೇ ದೃಷ್ಟಿಯ ಮೂಲಕ ಏನೇನೆಲ್ಲ ನೋಡಬಹುದು ಎಂಬುದನ್ನು ಊಹಿಸಿಕೊಂಡು ಎಚ್ಚರಿಕೆಯಿಂದ ಇರುವಂತೆ ಮಾಯಾವತಿಗೆ ಜಯಪ್ರದಾ ಸಲಹೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಜಯಪ್ರದಾ ವಿರುದ್ಧ ಪ್ರಕರಣ ದಾಖಲಾಗಿದೆ.

ಆಂಧ್ರ ಚುನಾವಣೆಗೆ -ಠಿ;10 ಸಾವಿರ ಕೋಟಿ ಖರ್ಚು!

ಹೈದರಾಬಾದ್: ಆಂಧ್ರ್ರ್ರದೇಶದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೇರಿ ಎಲ್ಲ ಪಕ್ಷಗಳು 10 ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿವೆ ಎಂದು ಟಿಡಿಪಿ ಸಂಸದ ಜೆ.ಸಿ. ದಿವಾಕರ ರೆಡ್ಡಿ ಹೇಳಿದ್ದಾರೆ. ಪ್ರತಿ ಮತ ಖರೀದಿಗೆ ಈ ಬಾರಿ 2,500 ರೂ.ವರೆಗೆ ಖರ್ಚು ಮಾಡಲಾಗಿದೆ. ಎಲ್ಲ ಪಕ್ಷಗಳು ಪ್ರತಿ ಕ್ಷೇತ್ರಕ್ಕೆ ತಲಾ 50 ಕೋಟಿ ರೂ. ಖರ್ಚು ಮಾಡಿವೆ. ಇದಕ್ಕೆಲ್ಲ ಭ್ರಷ್ಟಾಚಾರದಿಂದ ಗಳಿಸಿದ ಹಣವೇ ಬಳಕೆಯಾಗಿದೆ ಎಂದು ಹೇಳಿದ್ದಾರೆ. ಮತಯಾಚನೆಗೆ ಹೋದಾಗ ಜನರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ದಿನಗೂಲಿ ಕೆಲಸದವರು ಹೆಚ್ಚಿರುವ ಪ್ರದೇಶಗಳಲ್ಲಿ ಒಬ್ಬರಿಗೆ ಐದು ಸಾವಿರ ರೂ.ವರೆಗೆ ನೀಡಲಾಗಿದೆ ಎಂದಿದ್ದಾರೆ.

- Advertisement -

Stay connected

278,552FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....