ಮೋದಿ ವಿರುದ್ಧ ಮಾತನಾಡಿದ ಪತ್ರಕರ್ತನ ಬಂಧನ: ಜೈಲಲ್ಲಿರುವ ಪತ್ರಕರ್ತನಿಗೆ ಪತ್ರ ಬರೆದ ರಾಹುಲ್​

ನವದೆಹಲಿ: ಮೋದಿ, ಬಿಜೆಪಿ ಸರ್ಕಾರ ಮತ್ತು ಆರ್​ಎಸ್​ಎಸ್​ ನಡೆಯನ್ನು ಟೀಕಿಸಿದ್ದ ಇಂಫಾಲ ಮೂಲದ ಪತ್ರಕರ್ತ ಕಿಶೋರ್ ಚಂದ್ರ ವಾಂಗ್ಖೆಮ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಬಂಧಿಸಿರುವುದನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಈ ಕುರಿತು ಜೈಲಿನಲ್ಲಿರುವ ಪತ್ರಕರ್ತನಿಗೆ ಪತ್ರ ಬರೆದು ನೈತಿಕ ಬೆಂಬಲ ಸೂಚಿಸಿದ್ದಾರೆ.

ಆಡಳಿತಾರೂಢ ಸರ್ಕಾರ ಭಿನ್ನಾಭಿಪ್ರಾಯಗಳನ್ನೇ ಇಲ್ಲವಾಗಿಸಲು ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿರುವುದಕ್ಕೆ ಈ ಘಟನೆ ಮತ್ತೊಂದು ನಿದರ್ಶನ. ಮಣಿಪುರದ ಜನರ ಸಂವಿಧಾನದ ಹಕ್ಕುಗಳನ್ನು ನಾಶಪಡಿಸಲು ಬಿಜೆಪಿ ಸರ್ಕಾರವು ಹೊಸ ಯೋಜನೆಯನ್ನು ರೂಪಿಸಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹಿಂಸಾತ್ಮಕ ಪಡೆಗಳು ನಿರ್ಭಯವಾಗಿ ಹಿಂಸೆಯನ್ನು ಪ್ರಚೋದಿಸುತ್ತಿವೆ. ಆದರೆ ರಾಜ್ಯದ ಹೊಣೆಗಾರಿಕೆಯನ್ನು ಪ್ರಶ್ನಿಸುವವರು ಜೈಲು ಸೇರುತ್ತಿದ್ದಾರೆ. ಫ್ಯಾಸಿಸ್ಟ್ ಪಡೆಗಳು ಭಾರತದ ಕಲ್ಪನೆಯನ್ನು ನಾಶಮಾಡಲು ಮಾತ್ರ ಪ್ರಯತ್ನಿಸುತ್ತಿಲ್ಲ. ಆದರೆ ಅವರ ವಿಕೃತ ನಿರೂಪಣೆಗೆ ಸವಾಲು ಹಾಕುವ ಯಾರನ್ನಾದರೂ ಆಕ್ರಮಣ ಮಾಡುತ್ತವೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.

ಇಂಫಾಲದ ಸ್ಥಳೀಯ ಚಾನೆಲ್‌ವೊಂದರ ಪತ್ರಕರ್ತನಿಗೆ ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ನ. 27ರಂದು ಬಂಧಿಸಲಾಗಿತ್ತು. ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್‌ ಹಾಕಿದ ಒಂದು ತಿಂಗಳ ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿತ್ತು.

ವಿಡಿಯೋವೊಂದರಲ್ಲಿ ಪತ್ರಕರ್ತನು, ಮುಖ್ಯಮಂತ್ರಿಯವರು ಪ್ರಧಾನಮಂತ್ರಿಗಳ ಸೂತ್ರದ ಬೊಂಬೆಯಿದ್ದಂತೆ ಎಂದಿದ್ದರು. ಅಲ್ಲದೆ ಆರ್‌ಎಸ್‌ಎಸ್‌ ಅನ್ನು ಕೂಟ ಟೀಕಿಸಿದ್ದರು. ಆರ್‌ಎಸ್‌ಎಸ್‌ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜನ್ಮ ವಾರ್ಷಿಕೋತ್ಸವವನ್ನು ಆಯೋಜಿಸಿದ್ದಕ್ಕೆ ಕಿಡಿಕಾರಿದ್ದ ಅವರು, ಲಕ್ಷ್ಮೀಬಾಯಿಯು ಮಣಿಪುರಕ್ಕೆ ಏನನ್ನು ಮಾಡಿಲ್ಲ ಎಂದಿದ್ದರು. ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಅವರನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್)

One Reply to “ಮೋದಿ ವಿರುದ್ಧ ಮಾತನಾಡಿದ ಪತ್ರಕರ್ತನ ಬಂಧನ: ಜೈಲಲ್ಲಿರುವ ಪತ್ರಕರ್ತನಿಗೆ ಪತ್ರ ಬರೆದ ರಾಹುಲ್​”

  1. Good marketing Rahul Khan Nehru Gandh. The person was arrested for waging war against the nation and in Vijayavani he is being termed as national Hero and Modi critic if you don’t want to praise the Prime Minister support anti nationals

Comments are closed.