ಮೋದಿಯವರನ್ನು ‘ಚೌಕಿದಾರ್​ ಚೋರ್’​ ಎಂದಿದ್ದು ತಪ್ಪಾಯಿತು ಎಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಚೌಕಿದಾರ್​ ಚೋರ್​ ಹೈ ಎಂದು ಕರೆದಿದ್ದಕ್ಕೆ ರಾಹುಲ್​ ಗಾಂಧಿ ಕ್ಷಮಾಪಣೆ ಕೇಳಿದ್ದಾರೆ.

ಸುಪ್ರೀಂಕೋರ್ಟ್​ನ ನೋಟಿಸ್​ಗೆ ಉತ್ತರಿಸಿದ ಅವರು, ರಾಜಕೀಯ ಪ್ರಚಾರದ ಭರಾಟೆಯಲ್ಲಿ ಹೀಗೆ ಹೇಳಿದ್ದಾಗಿ ಸುಪ್ರೀಂಕೋರ್ಟ್​ಗೆ ಉತ್ತರಿಸಿದ್ದಾರೆ.

ಸುಪ್ರೀಂಕೋರ್ಟ್​ನ ರಫೇಲ್​ ತೀರ್ಪಿನ ಬಗ್ಗೆ ರಾಹುಲ್​ ಗಾಂಧಿ ಟೀಕಿಸಿದ್ದರು. ಅಲ್ಲದೆ, ಮತ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕಿದಾರ್​ ಚೋರ್​ ಹೈ ಎಂದು ಹೇಳುತ್ತಿದ್ದರು. ಅವರ ಈ ಹೇಳಿಕೆ ವಿರುದ್ಧ ಬಿಜೆಪಿ ಸುಪ್ರೀಂಕೋರ್ಟ್​ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಸೋರಿಕೆಯಾದ ದಾಖಲೆಗಳನ್ನು ಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್​ ಏ.10ರಂದು ಹೇಳಿತ್ತು. ಸುಪ್ರೀಂಕೋರ್ಟ್​ನ ಈ ನಿರ್ಧಾರ ನೈತಿಕ ಗೆಲುವು ಎಂದು ಹೇಳಿದ್ದ ರಾಹುಲ್​ ಗಾಂಧಿ, ಚೌಕಿದಾರ್​ ಜೀ (ಕಾವಲುಗಾರ) ಕಳ್ಳತನ ಮಾಡಿದ್ದಾರೆಂದು ನ್ಯಾಯಾಲಯವೇ ಸ್ಪಷ್ಟಪಡಿಸಿದೆ ಎಂದು ಅಮೇಠಿ ಪ್ರಚಾರದಲ್ಲಿ ಹೇಳಿದ್ದರು.

ಸುಪ್ರೀಂಕೋರ್ಟ್​ ದಾಖಲೆಗಳನ್ನು ಪರಿಶೀಲನೆ ಮಾಡುವುದಾಗಿ ಹೇಳಿದೆ. ಆದರೆ, ರಾಹುಲ್​ ಗಾಂಧಿಯವರ ಹೇಳಿಕೆ ನ್ಯಾಯಾಲಯದ ಹೇಳಿಕೆಗೆ ವಿರುದ್ಧವಾಗಿದೆ. ಇದು ನ್ಯಾಯಾಂಗ ನಿಂದನೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಅವರ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂಕೋರ್ಟ್​ ನಿರ್ಧಾರವೆಂದು ಹೋದ ಕಡೆಯಲ್ಲೆಲ್ಲ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅರ್ಜಿ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್​, ರಾಹುಲ್​ ಗಾಂಧಿಯವರು ಏ.22ರೊಳಗೆ ಸ್ಪಷ್ಟನೆ ನೀಡುವಂತೆ ಆದೇಶಿಸಿ ನೋಟಿಸ್​ ನೀಡಿತ್ತು.

2 Replies to “ಮೋದಿಯವರನ್ನು ‘ಚೌಕಿದಾರ್​ ಚೋರ್’​ ಎಂದಿದ್ದು ತಪ್ಪಾಯಿತು ಎಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ”

  1. That’s what I’m confused now. Do you vote for filthy congress liars. Modi hater Siddaramaiah is born in accident should also say sorry including filthy Dinesh Gundu Rao

Leave a Reply

Your email address will not be published. Required fields are marked *