ಅನಿಲ್‌ ಅಂಬಾನಿಗೆ ಲೂಟಿ ಮಾಡಲು ಚೌಕಿದಾರ್​ ಪ್ರಧಾನಿಯೇ ಬಾಗಿಲು ತೆರೆದರು: ರಾಹುಲ್​ ಗಾಂಧಿ

ನವದೆಹಲಿ: ರಫೇಲ್‌ ಡೀಲ್‌ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ತನಿಖಾ ವರದಿಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಅನಿಲ್‌ ಅಂಬಾನಿಯು ವಾಯುಪಡೆಯ 30 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಲು ನರೇಂದ್ರ ಮೋದಿಯವರೇ ಬಾಗಿಲು ತೆರೆದಿರುವುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ತನಿಖಾ ವರದಿಯನ್ನು ಟ್ಯಾಗ್‌ ಮಾಡಿದ್ದಾರೆ.

ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ಮತ್ತು ಉದ್ಯಮಿ ಅನಿಲ್​ ಅಂಬಾನಿ ತಳ್ಳಿಹಾಕಿದ್ದಾರೆ. ರಫೇಲ್​ ಒಪ್ಪಂದದಲ್ಲಿ ಯಾವುದೇ ಅಕ್ರಮ ಎಸಗಿಲ್ಲ ಎಂದು ಪುರುಚ್ಚರಿಸಿದ್ದಾರೆ.

ರಫೇಲ್​ ಒಪ್ಪಂದದಲ್ಲಿ ಪ್ರಧಾನಿ ಕಾರ್ಯಾಲಯ ಸಮನಾಂತರವಾಗಿ ಸಂಧಾನ ಮಾತುಕತೆ ನಡೆಸಿತ್ತು ಎಂಬ ಮತ್ತೊಂದು ಪತ್ರಿಕೆ ಪ್ರಕಟಿಸಿದ್ದ ವರದಿ ಕುರಿತು ಉತ್ತರಿಸಬೇಕೆಂದು ರಾಹುಲ್​ ಗಾಂಧಿ ಕಳೆದ ವಾರ ಆಗ್ರಹಿಸಿದ್ದರು. (ಏಜೆನ್ಸೀಸ್​)