ನವದೆಹಲಿ: ಖಾಸಗಿ ಕಂಪನಿಗೆ ಔಟ್‌ಸೋರ್ಸ್ ಮಾಡಿರುವ ಆರೋಗ್ಯ ಸೇತು ಆ್ಯಪ್ ಒಂದು ಅತ್ಯಾಧುನಿಕ ವಿಚಕ್ಷಣಾ ವ್ಯವಸ್ಥೆಯಾಗಿದ್ದು ಅದರಿಂದ ಜನರ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನವನ್ನು ನಮ್ಮ ಸುರಕ್ಷತೆಗೆ ಬಳಸುವುದು ತಪ್ಪಲ್ಲ. ಆದರೆ ಜನರ ಸಮ್ಮತಿ ಪಡೆಯದೆ ಅವರ ಚಲನವಲನಗಳ ಮೇಲೆ ನಿಗಾ ಇಡುವುದು ಮತ್ತು ಭಯ ಹುಟ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರೇ ಸೋಮವಾರದಿಂದ ಆಫೀಸಿಗೆ ಹೊರಡಲು ರೆಡಿಯಾಗಿ…
ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘‘ದಿನಕ್ಕೊಂದು ಸುಳ್ಳು ಹೇಳುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ತಮ್ಮ ಜೀವನದುದ್ದಕ್ಕೂ ಇನ್ನೊಬ್ಬರ ಮೇಲೆ ನಿಗಾ ಇಟ್ಟವರಿಗೆ ಇನ್ನೆಂತಹ ಯೋಚನೆಗಳು ಬರಲು ಸಾಧ್ಯ?’’ ಎಂದು ತಿರುಗೇಟು ನೀಡಿದ್ದಾರೆ.
‘‘ಕರೊನಾ ಅಪಾಯದಿಂದ ದೂರವಿರುವುದಕ್ಕೆ ಜನರಿಗೆ ಆರೋಗ್ಯ ಸೇತು ಆ್ಯಪ್ ಸಹಾಯ ಮಾಡುತ್ತದೆ. ಡೇಟಾ ಸೆಕ್ಯುರಿಟಿ ದೃಷ್ಟಿಯಿಂದಲೂ ಅದು ಅತ್ಯುತ್ತಮವಾಗಿದೆ. ಹಾಗಾಗಿಯೇ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಅದನ್ನು ಕಡ್ಡಾಯಗೊಳಿಸಿದೆ. ಖಾಸಗಿಯವರಿಗೂ ಕಡ್ಡಾಯಗೊಳಿಸಲು ಮನವಿ ಮಾಡಿದೆ’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಅವಕಾಶ ಕೊಟ್ಟಿದ್ದೇ ಸಾಕಾಯ್ತು; ಸ್ಪೇನ್ನ ಜನ ತಂಡೋಪತಂಡವಾಗಿ ಹೊರಬಂದರು…