20.8 C
Bangalore
Sunday, December 8, 2019

ರಾಹುಲ್​ ಒಬ್ಬರೇ ಪ್ರಧಾನಿ ಅಭ್ಯರ್ಥಿಯಲ್ಲ, ಬೇರೆಯವರೂ ಇದ್ದಾರೆ; ತೇಜಸ್ವಿ ಯಾದವ್​ ಮಾತಿನ ಮರ್ಮವೇನು?

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

ಪಠಣಾ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ವಿರೋಧ ಪಕ್ಷಗಳ ಒಮ್ಮತ ನಾಯಕನೇನೂ ಅಲ್ಲ. ಪ್ರಧಾನಮಂತ್ರಿ ಹುದ್ದೆ ರೇಸ್​ನಲ್ಲಿ ಅವರೊಬ್ಬರೇ ಇಲ್ಲ. ಇನ್ನೂ ಹಲವರಿದ್ದಾರೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್​ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್​ ಹೇಳಿದ್ದಾರೆ.

ಬಿಜೆಪಿ ವಿರುದ್ಧದ ಮಹಾಮೈತ್ರಿಯ ಹೊಣೆಗಾರಿಕೆಯನ್ನು ಇತ್ತೀಚೆಗೆ ನಡೆದ ಕಾಂಗ್ರೆಸ್​ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್​ ಗಾಂಧಿ ಅವರಿಗೆ ವಹಿಸಲಾಗಿತ್ತು. ಅಲ್ಲದೆ, ಮಹಾಮೈತ್ರಿಗೆ ರಾಹುಲ್​ ಅವರೇ ನಾಯಕ ಎಂದೂ ಕಾಂಗ್ರೆಸ್​ ಘೋಷಿಸಿಕೊಂಡಿತ್ತು. ಇದರ ಬೆನ್ನಿಗೇ, ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರೂ ಕೂಡ “ರಾಹುಲ್​ ಗಾಂಧಿ ಅವರು ವಿರೋಧ ಪಕ್ಷಗಳ ಮೈತ್ರಿ ಕೂಟದ ನಾಯಕನಾದರೆ ನನ್ನದೇನೂ ಅಭ್ಯಂತರವಿಲ್ಲ,” ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್​ ಇಂದು ಈ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷಗಳೆಲ್ಲವೂ ಒಂದೆಡೆ ಕುಳಿತು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿವೆ. ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ರೇಸ್​ನಲ್ಲಿರುವುದು ರಾಹುಲ್​ ಅವರು ಮಾತ್ರವಲ್ಲ. ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದಾರೆ, ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಬಿಎಸ್​ ಸಿಪಿ ನಾಯಕಿ ಮಾಯಾವತಿ ಅವರೂ ಇದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಮೈತ್ರಿ ಕೂಟದಿಂದ ಯಾರೇ ಪ್ರಧಾನಮಂತ್ರಿ ಅಭ್ಯರ್ಥಿಯಾದರೂ ಅವರಿಗೆ ಆರ್​ಜೆಡಿಯ ಸಂಪೂರ್ಣ ಬೆಂಬಲ ಇರಲಿದೆ ಎಂದೂ ಅವರು ಘೋಷಿಸಿದ್ದಾರೆ.

ನಮ್ಮ ಉದ್ದೇಶ ಏನಿದ್ದರೂ, ಸಂವಿಧಾನವನ್ನು ರಕ್ಷಣೆ ಮಾಡುವ ನಾಯಕನನ್ನು ಬೆಂಬಲಿಸುವುದು. ಅದು ರಾಹುಲ್​ ಗಾಂಧಿ ಅವರೂ ಆಗಿರಬಹುದು. ಆದರೆ, ರಾಹುಲ್​ ಗಾಂಧಿ ಅವರು ಬಿಜೆಪಿಯೇತರ ಪಕ್ಷಗಳನ್ನು ಸಂಘಟಿಸಿ, ಮಹಾಮೈತ್ರಿ ಕೂಟದ ವೇದಿಕೆಗೆ ಕರೆತರಬೇಕಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಈಗ ಸದ್ಯಕ್ಕೆ ಪ್ರಧಾನ ಮಂತ್ರಿ ಹುದ್ದೆ ನಮ್ಮ ಮುಂದಿರುವ ಚರ್ಚಿತ ಸಂಗತಿಯಲ್ಲ. ಬದಲಿಗೆ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳು ನಮ್ಮ ಮುಂದಿರುವ ಆಯ್ಕೆಯ ವಿಚಾರಗಳು ಎಂದೂ ತೇಜಸ್ವಿ ಹೇಳಿದ್ದಾರೆ.

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...