26.4 C
Bangalore
Monday, December 16, 2019

ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್

Latest News

ಎಮಿರೇಟ್ಸ್​ ವಿಮಾನದಲ್ಲಿ 2 ಕಿಲೋ ಚಿನ್ನ ಪತ್ತೆ: ರೆವೆನ್ಯೂ ಇಂಟೆಲಿಜೆನ್ಸ್ ಬಲೆಗೆ ವಂಚಿಯೂರು ಸಬ್​ ಇನ್​ಸ್ಪೆಕ್ಟರ್​

ತಿರುವನಂತಪುರ: ಚಿನ್ನ ಕಳ್ಳಸಾಗಣೆಗೆ ನೂರೆಂಟು ದಾರಿ. ಇದಕ್ಕೆ ಇಂಬು ನೀಡುವಂತೆ ಹಲವು ಪ್ರಕರಣಗಳು ದಾಖಲಾಗುತ್ತಲೇ ಇವೆ. ಸೋಮವಾರ ಈ ಪಟ್ಟಿಗೆ ಸೇರಿದ ಪ್ರಕರಣ...

ಚಾಲಕನ ಎದೆಗೆ ನುಗ್ಗಿದ್ದ ಕಬ್ಬಿಣದ ಸರಳು, ರಿಮ್ಸ್ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ರಾಯಚೂರು: ಅಪಘಾತದಲ್ಲಿ ಚಾಲಕನ ಎದೆಗೆ ನುಗ್ಗಿದ್ದ ಕಬ್ಬಿಣದ ಸರಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಚಾಲಕನ ಜೀವ ಉಳಿಸುವಲ್ಲಿ ಸ್ಥಳೀಯ ರಿಮ್ಸ್...

ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಆರಂಭಿಸಿ

ಲಿಂಗಸುಗೂರಲ್ಲಿ ರಾಜ್ಯ ರೈತಸಂಘದಿಂದ ಪ್ರತಿಭಟನೆ ಲಿಂಗಸುಗೂರು: ತಾಲೂಕಿನಲ್ಲಿ ತೊಗರಿ, ಭತ್ತ, ಹೈಬ್ರಿಡ್ ಕಡಲೆ ಖರೀದಿ ಕೇಂದ್ರ ಆರಂಭಿಸಿ ಎಲ್ಲ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಆಧರಿಸಿ...

ನಗರ ನಿವಾಸಿಗಳಿಗೆ ಸೌಕರ್ಯ ಕಲ್ಪಿಸಿ

ರಾಯಚೂರು ಉಳಿಸಿ ಹೋರಾಟ ಸಮಿತಿ ಪ್ರತಿಭಟನೆರಾಯಚೂರು: ನಗರ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ರಾಯಚೂರು ಉಳಿಸಿ ಹೋರಾಟ...

ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಿ

ಅರಟಾಳ: ಗ್ರಾಮಸ್ಥರು ಸ್ವಚ್ಛ, ಸುಂದರ, ಪರಿಸರ ನಿರ್ಮಾಣಕ್ಕೆ ಶ್ರಮಿಸಿರಿ. ಎಲ್ಲರೊಂದಿಗೆ ಬೆರೆತು ಸಹ ಜೀವನ ನಡೆಸಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ...

ಬೆಂಗಳೂರು: ಆಧುನಿಕ ಭಾರತದ ದೇವಸ್ಥಾನವೆಂದೇ ಕರೆಸಿಕೊಳ್ಳುವ ಹಿಂದುಸ್ತಾನ್ ಏರೋನಾಟಿಕ್ಸ್ (ಎಚ್​ಎಎಲ್) ಸಾಮರ್ಥ್ಯವನ್ನು ರಕ್ಷಣಾ ಸಚಿವರು ಪ್ರಶ್ನಿಸಿ ಅವಮಾನಿಸಿದ್ದಲ್ಲದೆ, 70 ವರ್ಷದ ಎಚ್​ಎಎಲ್​ನ ದೇಶಭಕ್ತಿಯನ್ನು ಮೂದಲಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ರಫೇಲ್ ಯುದ್ಧ ವಿಮಾನ ಒಪ್ಪಂದ ವಿಚಾರವಾಗಿ ಎಚ್​ಎಎಲ್ ನೌಕರರು ಮತ್ತು ನಿವೃತ್ತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಅವರು, ರಫೇಲ್ ಒಪ್ಪಂದದ ತಪ್ಪುಗಳನ್ನು ಮುಚ್ಚಿ ಹಾಕಲು ರಕ್ಷಣಾ ಸಚಿವರು ಫ್ರಾನ್ಸ್​ಗೆ ಓಡಿ ಹೋಗಿದ್ದಾರೆ. ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರು ಏನೇ ಮಾಡಿದರೂ ಹಾಲು ಯಾವುದು ನೀರು ಯಾವುದು ಎಂದು ದಾಖಲೆ ಸಹಿತ ಬಹಿರಂಗವಾಗಲಿದೆ ಎಂದರು. ಎಚ್​ಎಎಲ್ ಸಹಿತ ಸಾರ್ವಜನಿಕ ಉದ್ದಿಮೆ ನಾಶಕ್ಕೆ ಬಿಡುವುದಿಲ್ಲ. ದೇಶದ ಪ್ರತಿ ರಸ್ತೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ನನ್ನ ದೃಷ್ಟಿಯಲ್ಲಿ ಎಚ್​ಎಎಲ್ ಅಂದರೆ ಕಂಪನಿ ಅಲ್ಲ, ಇದು ದೇಶದ ಶಕ್ತಿ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್​ಎಎಲ್ ಕೊಡುಗೆ ಅಪಾರ. ಕಿಕ್ ಬ್ಯಾಕ್ ಅಥವಾ ಇನ್ಯಾವುದೋ ಕಾರಣಕ್ಕೆ 12 ದಿನದ ಕಂಪನಿಗೆ ಗುತ್ತಿಗೆ ನೀಡಿದ್ದು ಅನ್ಯಾಯ. ರಫೇಲ್ ಒಪ್ಪಂದದಲ್ಲಿ ಎಚ್​ಎಎಲ್ ಕೈಬಿಟ್ಟಿರುವುದರಿಂದ ಇಲ್ಲಿನ ಸಾವಿರಾರು ನೌಕರರು, ನಿವೃತ್ತ ನೌಕರರ ಭಾವನೆಗೆ ಧಕ್ಕೆ ತಂದಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಎಚ್​ಎಎಲ್​ಗೆ ಅವಮಾನ ಮಾಡಿದ್ದರೂ ಕ್ಷಮೆ ಕೋರಿಲ್ಲ, ನಾನು ನಿಮ್ಮ ಮುಂದೆ ನಿಂತು ಕ್ಷಮೆ ಕೋರುತ್ತೇನೆ. ಎಚ್​ಎಎಲ್​ಗೆ ಗುತ್ತಿಗೆ ಪಡೆಯುವ ಹಕ್ಕಿದೆ. ಆ ಜಂಟಲ್​ವ್ಯಾನ್​ಗೆ (ಅಂಬಾನಿ) ಏನಿದೆ ಸಾಮರ್ಥ್ಯ?

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಎಚ್​ಎಎಲ್​ಗೆ ಅವಕಾಶ ತಪ್ಪಿಸುವುದು ಮನುಷ್ಯ ಅಂಗ ಕಳೆದುಕೊಂಡಂತೆ. ಏರ್​ಫೋರ್ಸ್​ಗೆ ಎಚ್​ಎಎಲ್ ಕೊಡುಗೆ ದೊಡ್ಡದಿದೆ. ಈ ಸಂಸ್ಥೆ ಏಷ್ಯಾದಲ್ಲೇ ಬೆಸ್ಟ್.

| ಬಾಬುರಾವ್ ಏರ್ ಫೋರ್ಸ್ ನಿವೃತ್ತ ಅಧಿಕಾರಿ

ಸಂವಾದ ಸಾರಾಂಶ

# ಒಂದೂವರೆ ತಾಸಿನ ಸಂವಾದದಲ್ಲಿ ಐವರು ಮಾಜಿ ನೌಕರರಿಂದ ಎಚ್​ಎಎಲ್ ಸಾಮರ್ಥ್ಯ ಬಣ್ಣನೆ.

# ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಚ್​ಎಎಲ್ ಆಡಳಿತ ಮಂಡಳಿ ಸುತ್ತೋಲೆ ಕಳಿಸಿದ್ದರೂ 40 ಮಂದಿ ಪಾಲ್ಗೊಂಡಿದ್ದರು. ಒಟ್ಟು ಉಪಸ್ಥಿತಿ ಸಂಖ್ಯೆ 100.

# ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಚ್​ಎಎಲ್ ಎಸ್ಸಿ-ಎಸ್ಟಿ ನೌಕರರ ಸಂಘದಿಂದ ರಾಹುಲ್ ಗಾಂಧಿಗೆ ಅಧಿಕೃತ ಆಹ್ವಾನ.

# ಸಂವಾದದ ಆರಂಭದಲ್ಲಿ ಎಚ್​ಎಎಲ್ ಉತ್ಪಾದಿತ ವಿಮಾನ, ಹೆೆಲಿಕಾಪ್ಟರ್​ಗಳ ವಿಡಿಯೋ ಪ್ರದರ್ಶನ.

# ರಾಹುಲ್ 2 ನಿಮಿಷ ಮಾತನಾಡಿ ಸಂವಾದದ ಉದ್ದೇಶ ತಿಳಿಸಿದರು, ಕೊನೆಯಲ್ಲಿ ಅಭಿಪ್ರಾಯ ಹೇಳಿ ಮುಕ್ತಾಯಗೊಳಿಸಿದರು.

# ನಿವೃತ್ತ ಅಧಿಕಾರಿ ಸಿರಾಜುದ್ದೀನ್ ಮನವಿ ಸಲ್ಲಿಸುವಾಗ ರಾಹುಲ್ ಗಾಂಧಿ ಎಂದು ಕರೆವ ಬದಲು ರಾಜೀವ್ ಗಾಂಧಿ ಎಂದು ಸಂಬೋಧಿಸಿದರು. ಬಳಿಕ ‘ನಾವು ಅವರ ಕಾಲದವರು. ಹಾಗಾಗಿ ಹೇಳಿದೆ’ ಎಂದು ಸಮರ್ಥಿಸಿಕೊಂಡಾಗ ರಾಹುಲ್ ನಾಚಿ ನೀರಾದರು.

# ಒಂದು ಭಾಷಣಕ್ಕೆ ಈ ವಿಷಯ ಮುಗಿಸುವು ದಿಲ್ಲ. ಹೋರಾಟ ತೀವ್ರಗೊಳಿಸುವೆ, ಯಾವುದೇ ಸಂದರ್ಭದಲ್ಲಿ ಕರೆಯಿರಿ ಬರುತ್ತೇನೆ ಎಂದು ರಾಹುಲ್ ಭರವಸೆ.

# ಭ್ರಷ್ಟಾಚಾರ ಮತ್ತು ಅಂಬಾನಿಗೆ ಸಹಾಯ ಮಾಡಲು ಮೋದಿ ಎಚ್​ಎಎಲ್ ನಾಶ ಮಾಡುತ್ತಿದ್ದಾರೆಂದು ರಾಹುಲ್ ಗಂಭೀರ ಆರೋಪ.

# ನಮ್ಮ, ನಿಮ್ಮ ಮಾತನ್ನು ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲವೆಂದು ರಾಹುಲ್ ಕ್ಯಾಮರಾಗಳತ್ತ ಬೊಟ್ಟು ಮಾಡಿ ನಕ್ಕರು.

ರಫೇಲ್ ಗುತ್ತಿಗೆ ಕೊಡಿ ಅಂತ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಸಾಮರ್ಥ್ಯ ನೋಡಿ ಕೊಡಿ ಎನ್ನುತ್ತಿದ್ದೇವೆ. ಕೇಂದ್ರ ಸರ್ಕಾರ ಎಚ್​ಎಲ್ ಕೈಬಿಟ್ಟ ನಿರ್ಧಾರ ದಿಂದ ನಮಗೆ ಅವಮಾನವಾಯಿತು.

| ಸಿರಾಜುದ್ದೀನ್ ಎಚ್​ಎಎಲ್ ನಿವೃತ್ತ ಅಧಿಕಾರಿ

ರಫೇಲ್ ಪ್ರಾಜೆಕ್ಟ್ ಕೈ ತಪ್ಪಿದೆ. ರಾಹುಲ್ ಆಂದೋಲನಕ್ಕೆ ನಮ್ಮ ಬೆಂಬಲವಿದೆ. ಸರ್ಕಾರಿ ಸ್ವಾಮ್ಯದ ಕಂಪನಿ ನಾಶಕ್ಕೆ ಕೇಂದ್ರ ಮುಂದಾಗಿದೆ. ಇದನ್ನು ತಡೆಯಲು ಅಂದೋಲನ ಅಗತ್ಯವಿದೆ.

| ಮಹದೇವನ್ ನಿವೃತ್ತ ನೌಕರ

ಅಗತ್ಯ ಸಾಮಗ್ರಿ ನೀಡಿ ಎಂದು ಸೇನೆ ಗೋಗರೆದರೂ ನೀಡದ ಕಾಂಗ್ರೆಸ್ ಇದೀಗ ರಾಜಕೀಯ ಕಾರಣಕ್ಕಾಗಿ ಎಚ್​ಎಎಲ್ ಉಳಿಸುವ ನಾಟಕ ಮಾಡುತ್ತಿದೆ. ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಕ್ರಮ ಗೊತ್ತಿಲ್ಲ.

| ಶೋಭಾ ಕರಂದ್ಲಾಜೆ ಸಂಸದೆ


ಮಂಕುಬೂದಿ ಎರಚುತ್ತಿರುವಿರೇಕೆ?

ಬೆಂಗಳೂರು: ರಫೇಲ್ ಒಪ್ಪಂದ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ವಕ್ತಾರ ಅಶ್ವತ್ಥ್​ನಾರಾಯಣ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.

126 ಎಂಎಂಆರ್​ಸಿಎ ವಿಮಾನವನ್ನು ಡಸಾಲ್ಟ್​ನಿಂದ ಖರೀದಿಸಲು ಯುಪಿಎ ಸರ್ಕಾರ 2012ರಲ್ಲಿ ಒಪ್ಪಂದ ಮಾಡಿ ಕೊಂಡಿದ್ದರೂ 2014ರವರೆಗೂ ಯಾವುದೇ ಕ್ರಮ ಕೈಗೊಳ್ಳದ್ದು ರಾಷ್ಟ್ರದ ಸುರಕ್ಷತೆಯೊಂದಿಗೆ ನೀವು ಮಾಡಿಕೊಂಡ ರಾಜಿಯಲ್ಲವೇ?

ರಫೇಲ್ ಒಪ್ಪಂದದ ಕುರಿತು ಡಸಾಲ್ಟ್ ಹಾಗೂ ಎಚ್​ಎಎಲ್ ನಡುವೆ ಮೂಡಿದ್ದ ಭಿನ್ನಮತ ಪರಿಹರಿಸಲು ಪ್ರಯತ್ನಿಸದೆ ಎಚ್​ಎಎಲ್ ಅನ್ನು ಒಪ್ಪಂದದಿಂದ ದೂರ ದೂಡಿದ್ದು ನೀವು ಮಾಡಿದ ದ್ರೋಹವಲ್ಲವೇ?

ಒಪ್ಪಂದದಲ್ಲಿ ಮುಂದುವರಿಯದೆ ಭಾರತದೊಂದಿಗೆ ಇಂತಹ ಒಪ್ಪಂದ ಕೈಗೊಳ್ಳವುದು ಕಠಿಣ ಎಂಬಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರಭಿಪ್ರಾಯ ಮೂಡಿಸಿದ್ದು ಯಾಕೆ?

ನೀವು ಹೊರಡಿಸಿದ 2007ರ ಆರ್​ಪಿಎಫ್ ಪ್ರಕಾರ ಗ್ರೀನ್ ವಿಮಾನ ದರ -ಠಿ;737 ಕೋಟಿ. ಅದೇ ವಿಮಾನಕ್ಕೆ 2015ರಲ್ಲಿ ಎನ್​ಡಿಎ ಸರ್ಕಾರ -ಠಿ;670 ಕೋಟಿಗೆ ಮಾತುಕತೆ ನಡೆಸಿದೆ. ಈ ಸತ್ಯ ಮುಚ್ಚಿಟ್ಟು ದೇಶದ ಜನರ ದಾರಿ ತಪ್ಪಿಸುತ್ತಿದ್ದೀರಲ್ಲವೇ?

ಯಾವುದೇ ಕ್ಷಿಪಣಿಗಳಿಲ್ಲದ ವಿಮಾನ ಖರೀದಿ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಜ್ಜಿತ ವಿಮಾನ ಖರೀದಿಸಲಾಗಿದೆ. ಈ ವ್ಯತ್ಯಾಸ ತಿಳಿಸದೆ ಕೇವಲ ದರದೊಂದಿಗೆ ಹೋಲಿಕೆ ಮಾಡಿ ಜನರ ಕಣ್ಣಿಗೆ ಮಂಕುಬೂದಿ ಎರಚುವ ಪ್ರಯತ್ನ ಏಕೆ ನಡೆಸುತ್ತಿದ್ದೀರಾ?

ಒಪ್ಪಂದದಿಂದ ಅನಿಲ್ ಅಂಬಾನಿಗೆ -ಠಿ;30 ಸಾವಿರ ಕೋಟಿ ಲಾಭವಾಗಿದೆ ಎಂದು ಹೇಳುತ್ತಿದ್ದೀರಿ. ಭಾರತದಲ್ಲಿ ನಾವು ಒಪ್ಪಂದ ಮಾಡಿಕೊಂಡಿರುವ 100 ಕಂಪನಿಗಳ ಪೈಕಿ ರಿಲಯನ್ಸ್ ಸಹ ಒಂದು, ಈ ಕಂಪನಿ ಮೇಲೆ ಒಟ್ಟು ಒಪ್ಪಂದದ ಶೇ.10 ಅಂದರೆ 3 ಸಾವಿರ ಕೋಟಿ ರೂ. ಮಾತ್ರ ಹೂಡಿಕೆ ಎಂದು ಸ್ವತಃ ಡಸಾಲ್ಟ್ ಸಂಸ್ಥೆ ಸ್ಪಷ್ಟಪಡಿಸಿದೆಯಲ್ಲ?

- Advertisement -

Stay connected

278,751FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...