ಭಾರತ್​ ಬಂದ್​: ಬೀದಿಗಿಳಿದ ರಾಹುಲ್​, ರಾಮ್​​ಲೀಲ ಮೈದಾನದತ್ತ ನಡಿಗೆ

ನವದೆಹಲಿ: ಇಂಧನ ಬೆಲೆ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಕೇಂದ್ರ ಸರ್ಖಾರದ ವಿರುದ್ಧ ಕಾಂಗ್ರೆಸ್​ ಸೇರಿ 21 ವಿರೋಧ ಪಕ್ಷಗಳು ಸೇರಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಬೆಳಗ್ಗೆಯೇ ಬಂದ್ ನೇತೃತ್ವ ವಹಿಸಿ ರಸ್ತೆಗಿಳಿದಿದ್ದಾರೆ.

ನವದೆಹಲಿಯಲ್ಲಿ ಪ್ರತಿಭಟನಾಕಾರರ ಜತೆ ಸೇರಿರುವ ರಾಹುಲ್​ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರು ರಾಜ್​ಘಾಟ್​ನಿಂದ ರಾಮ್​ಲೀಲ ಮೈದಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.

ರಾಮ್​​ಲೀಲಾ ಮೈದಾ​​ನದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕಾಂಗ್ರೆಸ್​​ ಸೇರಿ ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಭಾರತ್​​ ಬಂದ್​ಗೆ ಬೆಂಬಲ ನೀಡಿದ್ದಾರೆ. (ಏಜೆನ್ಸೀಸ್​)