18 C
Bangalore
Friday, December 6, 2019

ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ?

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಮಹತ್ವದ ಸಭೆ ನಡೆಸಿದ್ದು, ಕೆಪಿಸಿಸಿ ಪುನಾರಚನೆ, ಮೈತ್ರಿ ಸರ್ಕಾರದ ಆಗುಹೋಗುಗಳ ಬಗ್ಗೆ ವಿಸ್ತೃ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ ಸುಮಾರು 42 ನಿಮಿಷ ರಾಹುಲ್ ಜತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಹಾಗೂ ಕೆ.ಸಿ.ವೇಣುಗೋಪಾಲ್ ಲೋಕಸಭೆ ಚುನಾವಣೆ ಫಲಿತಾಂಶ ಹಿನ್ನೆಡೆ, ಮೈತ್ರಿ ಸರ್ಕಾರದ ಅನಿವಾರ್ಯತೆಗಳು, ಮೈತ್ರಿ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ, ಪಕ್ಷದ ಸಂಘಟನೆ, ಮುಂದೆ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೈತ್ರಿ ಸರ್ಕಾರದಲ್ಲಿ ಮುಂದುವರಿದದ್ದೇ ಆದಲ್ಲಿ ಪಕ್ಷದ ಮೇಲಾಗುವ ಪರಿಣಾಮ ಕುರಿತಂತೆಯೂ ಸಿದ್ದರಾಮಯ್ಯ ಹೆಚ್ಚು ಹೊತ್ತು ಬೆಳಕು ಚೆಲ್ಲಿದ್ದಾರೆನ್ನಲಾಗಿದೆ. ರಾಹುಲ್ ಗಾಂಧಿ ಸಹ ಅವರ ಮಾತನ್ನೂ ಕಿವಿಗೊಟ್ಟು ಆಲಿಸಿ, ತೀರ್ವನವನ್ನು ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಪದಾಧಿಕಾರಿಗಳನ್ನು ಕೈ ಬಿಟ್ಟು ಹೊಸ ತಂಡ ಕಟ್ಟುವ ಪ್ರಸ್ತಾಪ ಕೂಡ ಸಿದ್ದರಾಮಯ್ಯ ಮಾಡಿದ್ದು, ಈ ಭೇಟಿ ಬಳಿಕವಷ್ಟೇ ಕೆಪಿಸಿಸಿ ಘಟಕ ವಿಸರ್ಜಿಸುವ ತೀರ್ಮಾನ ಹೊರಬಿದ್ದಿದೆ. ರಾಹುಲ್ ಮತ್ತು ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದ ಮಟ್ಟಿಗಂತೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಮೈತ್ರಿ ಮುರಿಯಲು ಕಸರತ್ತು?

ಮೈತ್ರಿ ಸರ್ಕಾರ ಮುಂದುವರಿದಿದ್ದೇ ಆದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಎಚ್.ಕೆ.ಪಾಟೀಲ್ ಗುಲಾಂ ನಬಿ ಆಜಾದ್, ಎ.ಕೆ.ಆಂಟನಿ ಅವರನ್ನು ಭೇಟಿ ಮಾಡಿ ಸರ್ಕಾರದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಗುರುವಾರ ರಾಹುಲ್, ಸೋನಿಯಾ ಭೇಟಿಗೆ ಸಮಯ ಕೇಳಿದ್ದು, ಅವರ ಮನವೊಲಿಸಲು ಸಹ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಲಡ್ಡು ತಿನ್ನಿಸಿದ ರಾಹುಲ್

49ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಗಾಂಧಿಯವರನ್ನು ಅಭಿನಂದಿಸಿದ ಸಿದ್ದರಾಮಯ್ಯ ಲಡ್ಡು ನೀಡಿದ್ದಾರೆ. ಈ ವೇಳೆ ರಾಹುಲ್ ಸಿದ್ದರಾಮಯ್ಯಗೇ ಲಡ್ಡು ತಿನ್ನಿಸಿ ಕಳುಹಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಕೂಡ ರಾಹುಲ್ ಅವರನ್ನು ಕಂಡು ಶುಭಕೋರಿದರಲ್ಲದೇ, ಪಕ್ಷದ ಅಧ್ಯಕ್ಷರಾಗಿ ತಾವು ಮುಂದುವರಿಯಬೇಕು, ನಾವು ನಿಮ್ಮ ಜತೆಗಿರುತ್ತೇವೆ. ನೀವೇ ಸೂಕ್ತ ಎಂದು ಕೋರಿಕೊಂಡಿದ್ದಾರೆ.

ಸರ್ಜರಿ ಇನ್ನಷ್ಟು!

ಕೆಪಿಸಿಸಿ ಪದಾಧಿಕಾರಿಗಳನ್ನು ಕೈಬಿಡುವ ಪಕ್ಷದ ತೀರ್ಮಾನ ಸಂಘಟನೆಗೆ ಮಾಡುತ್ತಿರುವ ಸರ್ಜರಿಯ ಆರಂಭವಷ್ಟೇ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇನ್ನು ಮುಂದೆ ಇನ್ನಷ್ಟು ಬದಲಾವಣೆ ಕಾಣಬಹುದಾಗಿದೆ. ವಿವಿಧ ಘಟಕಗಳು, ಪಕ್ಷಕ್ಕೆ ಲಾಭಕರವಲ್ಲದ ವ್ಯಕ್ತಿಗಳನ್ನು ಬದಿಗೆ ತಳ್ಳಿ ಹೊಸ ಮುಖಗಳಿಗೆ ಮಣೆಹಾಕಲು ನಿರ್ಧರಿಸಲಾಗಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿದ್ದರಾಮಯ್ಯಗೆ ರಾಹುಲ್ ಅವಕಾಶ ಕೊಟ್ಟಿದ್ದಾರೆ ಎನ್ನಲಾಗಿದೆ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...