Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಇನ್ಯಾವ ಮೋದಿ ದೇಶ ಬಿಡುತ್ತಾರೋ!

Sunday, 25.03.2018, 3:04 AM       No Comments

ಮೈಸೂರು: ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಸೇರಿ ಹಲವು ಉದ್ಯಮಿಗಳು ಬ್ಯಾಂಕ್​ನಲ್ಲಿ ಸಾಲ ಪಡೆದು ವಂಚಿಸಿ ದೇಶ ಬಿಟ್ಟು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ಯಾವ ಮೋದಿ ದೇಶ ಬಿಟ್ಟು ಓಡಿ ಹೋಗುತ್ತಾರೋ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ಪರೋಕ್ಷವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.

ನಗರದ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಂಪತ್ತು ಕೇವಲ 20ರಿಂದ 25 ಜನರ ಕೈಯಲ್ಲಿದೆ. ಉದ್ಯಮಿಗಳು, ಬಂಡವಾಳಗಾರರಿಗೆ ಬ್ಯಾಂಕ್​ಗಳು ಸುಲಭವಾಗಿ ಸಾಲ ನೀಡುವಂತೆ ಜನ ಸಾಮಾನ್ಯರಿಗೆ ಸಾಲ ನೀಡುತ್ತಿಲ್ಲ ಎಂದು ವಿಷಾದಿಸಿದರು.

ಅಣ್ಣ ಹಜಾರೆ ಅವರು ಲೋಕಪಾಲ್ ಮಸೂದೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಯುಪಿಎ ಸರ್ಕಾರದಲ್ಲಿಯೇ ಲೋಕಪಾಲ ಮಸೂದೆ ಅಂಗೀಕಾರವಾಗಿದೆ. ಆದರೆ ಈಗಿನ ಎನ್​ಡಿಎ ಸರ್ಕಾರ ಲೋಕಪಾಲರನ್ನು ನೇಮಿಸಲು ಮೀನಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.

ಏಕರೂಪದ ಜಿಎಸ್​ಟಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏಕರೂಪದ ಜಿಎಸ್​ಟಿ ಜಾರಿ ಮಾಡಲಾಗುವುದು. ಸಿಂಗಾಪೂರ ಮಾದರಿಯಲ್ಲಿ ಶೇ.18ರ ಪ್ರಮಾಣದ ತೆರಿಗೆಯನ್ನೇ ಅಂತಿಮಗೊಳಿಸುತ್ತೇವೆ ಎಂದು ರಾಹುಲ್ ತಿಳಿಸಿದರು.

ಸೆಲ್ಪಿಗೆ ಮುಗಿಬಿದ್ದ ‘ಮಹಾರಾಣಿ’ಯರು: ಸಂವಾದದಲ್ಲಿ ಭಾಗವಹಿಸಿ ಪ್ರಶ್ನೆಗೆ ಉತ್ತರಿಸುತ್ತಿರುವಂತೆಯೇ ಸಬ್ರೀನ್ ಕೌಸರ್ ಎಂಬ ವಿದ್ಯಾರ್ಥಿನಿಯು ಪ್ರಶ್ನೆ ಕೇಳುವ ಬದಲು ನಿಮ್ಮೊಂದಿಗೆ ಒಂದು ಸೆಲ್ಪಿ ತೆಗೆದುಕೊಳ್ಳಬೇಕು ಎನ್ನುವ ಬೇಡಿಕೆ ಇಟ್ಟಳು. ಇದಕ್ಕೆ ಒಪ್ಪಿದ ರಾಹುಲ್​ಗಾಂಧಿ ವೇದಿಕೆಯಿಂದ ಇಳಿದು ವಿದ್ಯಾರ್ಥಿನಿ ಇದ್ದಲ್ಲಿಗೆ ತೆರಳಿ ಸೆಲ್ಪಿ ತೆಗೆಸಿಕೊಂಡರು. ಸಂವಾದ ಮುಗಿದ ಬಳಿಕ ಮುನ್ನುಗ್ಗಿ ಬರುತ್ತಿದ್ದ ವಿದ್ಯಾರ್ಥಿನಿಯರ ಸೆಲ್ಪಿಗೆ ಮುಖವೊಡ್ಡಿದ ರಾಹುಲ್ ನಗುತ್ತಲೇ ಕೈ ಕುಲುಕಿ ಮುನ್ನಡೆದರು.

ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದರೊಂದಿಗೆ ಎರಡು ದಿನಗಳ ಪ್ರವಾಸಕ್ಕೆ ಚಾಲನೆ ನೀಡಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು. ಅಲ್ಲಿಂದ ಚಾಮುಂಡಿಬೆಟ್ಟಕ್ಕೆ 9.30ರ ಸುಮಾರಿಗೆ ಆಗಮಿಸಿದ ಅವರನ್ನು ದಾಸೋಹ ಭವನದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ದೇಗುಲದ ಗುಡಿಯೊಳಗೆ ಪ್ರವೇಶಿಸಿದ ಅವರು ಮೊದಲು ಗಣಪತಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದೇವಿ ದರ್ಶನ ಪಡೆದರು.

ಸೋನಿಯಾ ಹೆಸರಲ್ಲಿ ಅರ್ಚನೆ

ರಾಹುಲ್ ಮತ್ತು ಅವರ ತಾಯಿ ಸೋನಿಯಾಗಾಂಧಿ ಹೆಸರಿನಲ್ಲಿ ಅರ್ಚಕರು ಅರ್ಚನೆ ಮಾಡಿದರು. ಈ ವೇಳೆ, ‘ದೇಶಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದು ಆಗಲಿ’ ಎಂದು ದೇವಿ ಬಳಿ ರಾಹುಲ್ ‘ಸಂಕಲ್ಪ ಪ್ರಾರ್ಥನೆ’ ಮಾಡಿದರು. ಸಿಎಂ ಸಿದ್ದರಾಮಯ್ಯ, ದೇವಿ ಹಿನ್ನೆಲೆ ಕುರಿತು ಮಾಹಿತಿ ನೀಡಿದರು.

ಪ್ರಶ್ನೆಗೆ ಅವಕ್ಕಾದ ರಾಹುಲ್ ಗಾಂಧಿ

ಮಹಾರಾಣಿ ಕಲಾ ಕಾಲೇಜಿನ ಪ್ರಥಮ ಎಂ.ಎ. ವಿದ್ಯಾರ್ಥಿನಿ ಮಹದೇವಮ್ಮ ಅವರು ಕನ್ನಡದಲ್ಲಿಯೇ ರಾಹುಲ್​ಗಾಂಧಿಗೆ ‘ಜಾತ್ಯತೀತ ಎನ್ನುವ ನೀವು ಸರ್ಕಾರದ ಸೌಲಭ್ಯ ನೀಡುವಾಗ ಒಂದು ವರ್ಗದವರಿಗೆ ಸೌಲಭ್ಯ ನೀಡಿ ಮತ್ತೊಬ್ಬರಿಗೆ ಏಕೆ ನೀಡುತ್ತಿಲ್ಲ. ಇದು ವಿದ್ಯಾರ್ಥಿ ದಿಶೆಯಲ್ಲಿಯೇ ತಾರತಮ್ಯ ಹುಟ್ಟಲು ಕಾರಣವಾಗುತ್ತದೆ’ ಎಂದು ಪ್ರಶ್ನಿಸಿದರು. ಕನ್ನಡದಲ್ಲಿ ತೂರಿ ಬಂದ ಪ್ರಶ್ನೆ ಅರ್ಥವಾಗದಿದ್ದಾಗ ವೇದಿಕೆಯಲ್ಲಿ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರನ್ನು ಸಹಾಯಕ್ಕೆ ಕರೆದು ಇಂಗ್ಲಿಷ್​ಗೆ ತರ್ಜುಮೆ ಮಾಡುವಂತೆ ಹೇಳಿದರು. ಪರಮೇಶ್ವರ್ ಅವರು ಪ್ರಶ್ನೆಯನ್ನು ಇಂಗ್ಲಿಷ್​ಗೆ ಭಾಷಾಂತರಿಸಿ ಹೇಳಿದಾಗ, ‘ಇದು ಕೇಂದ್ರದ್ದೋ, ರಾಜ್ಯದ್ದೋ’ ಎಂದು ರಾಹುಲ್ ಮರುಪ್ರಶ್ನಿಸಿದರು. ನಾನು ಕೇಳುತ್ತಿರುವುದು ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆ ಎಂದು ವಿದ್ಯಾರ್ಥಿನಿ ಸ್ಪಷ್ಟಪಡಿಸಿದಾಗ ಕ್ಷಣ ಕಾಲ ಅವಕ್ಕಾದ ರಾಹುಲ್​ಗಾಂಧಿ, ಈ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿದ್ದಾರೆ ಎಂದರು.

ಎನ್​ಸಿಸಿ ಗೊತ್ತಿಲ್ಲ: ಕಾಲೇಜುಗಳಲ್ಲಿ ಇರುವ ಎನ್​ಸಿಸಿಯ ‘ಸಿ’ ಪ್ರಮಾಣಪತ್ರ ಪಡೆದವರಿಗೆ ಮುಂದೆ ನಿಮ್ಮ ಸರ್ಕಾರ ಬಂದರೆ ಏನು ಸೌಲಭ್ಯ ನೀಡುತ್ತೀರಾ ಎನ್ನುವ ಪ್ರಶ್ನೆಗೆ, ಎನ್​ಸಿಸಿ ತರಬೇತಿ, ಆ ರೀತಿಯ ವಿಚಾರಗಳ ಬಗ್ಗೆ ಅಷ್ಟೊಂದು ವಿವರ ತಿಳಿದಿಲ್ಲ. ಹಾಗಾಗಿ ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಆಕೆಯನ್ನು ನಿರಾಸೆಗೊಳಿಸಿದರು.

ಮತ್ತೆ ರಾಗಾ ಎಡವಟ್ಟು!

ಚಾಮರಾಜನಗರದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್ ಅವರು ಸರ್ ಎಂ.ವಿಶ್ವೇಶ್ವರಯ್ಯ ಹೆಸರು ಹೇಳಲು ತಡಬಡಾಯಿಸಿದರು. ವಿಶ್ವೇಶ್ವರಯ್ಯ ಎನ್ನುವ ಬದಲು ಈಶ್ವರಯ್ಯ, ರಯ್ಯ ಎಂದು ಸಂಭೋದಿಸಿದರು. ತಪ್ಪು ಸರಿಪಡಿಸಿಕೊಳ್ಳುವ ಯತ್ನದಲ್ಲಿ ‘ಈಶ್ವ ರಯಾ, ರಯಾ… ರಯಾ…’ ಎಂದು ಹಲ ಬಾರಿ ಪ್ರಯತ್ನಿಸಿದರೂ ಆಗಲಿಲ್ಲ. ಅಲ್ಲದೆ, ಕುವೆಂಪು ಎಂದು ಸ್ಪಷ್ಟವಾಗಿ ಹೇಳುವಾಗಲೂ ತಡವರಿಸಿದರು. ವೇದಿಕೆ ಎದುರು ಕುಳಿತಿದ್ದ ಜನರು ಈಶ್ವರಯ್ಯ ಅಲ್ಲ, ವಿಶ್ವೇಶ್ವರಯ್ಯ ಎಂದು ಹೇಳಿಕೊಂಡು ನಕ್ಕರು.

ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಿದ್ದು ಜತೆಗೆ ಇನ್ನೊಂದು ಪಕ್ಷವಿದೆ.ಅದು ಜೆಡಿಎಸ್. ಆದರೆ ಜೆಡಿಎಸ್ ಎಂದರೆ ಜನತಾದಳ ಸಂಘ ಪರಿವಾರ. ಇದು ಬಿಜೆಪಿಯ ಬಿ ಟೀಮ್

| ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ

Leave a Reply

Your email address will not be published. Required fields are marked *

Back To Top