ಬೆಂಗಳೂರು: ಉತ್ತರ ಪ್ರದೇಶದ ಪೊದೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿದ್ದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಮತ್ತೊಂದೆಡೆ ರಾಹುಲ್ ಹಾಗೆ ಪೊದೆಯಲ್ಲಿ ಕಾಣಿಸಿದ ಹಿನ್ನೆಲೆಯ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದೆ.

ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಸೋದರಿ ಪ್ರಿಯಾಂಕಾ ವಾಧ್ರಾ ಹಾಗೂ ಕಾಂಗ್ರೆಸ್ನ ಇತರ ಹಲವು ನಾಯಕರೊಂದಿಗೆ ರಾಹುಲ್ ಗುರುವಾರ ಅಲ್ಲಿಗೆ ತೆರಳಿದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ವಾಹನ ತಡೆದಿದ್ದರು. ಅದಾಗ್ಯೂ ವಾಹನದಿಂದ ಇಳಿದು ಹತ್ರಾಸ್ನತ್ತ ಸಾಗಿದ ರಾಹುಲ್ ಮತ್ತಿತರರನ್ನು ಪೊಲೀಸರು ತಡೆಯುವ ಸಂದರ್ಭದಲ್ಲಿ ಮಾತಿನ ಚಕಮಕಿ ಜತೆಗೆ ನೂಕಾಟವೂ ಉಂಟಾಗಿತ್ತು.
ಪೊಲೀಸರು ತಡೆದರೂ ಮುಂದೆ ಹೋಗಲು ಯತ್ನಿಸಿದ ರಾಹುಲ್ ಕೆಲವೇ ಕ್ಷಣದಲ್ಲಿ ಪಕ್ಕದ ಪೊದೆಗೆ ಬಿದ್ದ ದೃಶ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ತಮ್ಮನ್ನು ಪೊಲೀಸರು ತಳ್ಳಿದರು ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ತಳ್ಳಿಲ್ಲ, ರಾಹುಲ್ ಅವರೇ ಪೊದೆಗೆ ನೆಗೆದಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದು, ವಿಡಿಯೋ ಕೂಡ ಅದಕ್ಕೆ ಪುಷ್ಟಿ ನೀಡುವಂತೆಯೇ ಇದೆ. ಇನ್ನೂ ಈ ಬಗ್ಗೆ ಚರ್ಚೆ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದೆ.
https://www.facebook.com/VVani4U/posts/3822111524483484?__cft__[0]=AZVqCogdr8AdD26gU-InTOi_8COnkNM5Y9CeFmptHxAcP4sUDYCV5N6uX3Kuw5aeZqrgJTTkwJZZd9NwBplLDs3xfy1cT3wjLXRLLWi_N3uE41z5fCwFbu9GYYgfkebSsiBZflMNh61IoSDrsNxE9iO8RqDA3DXC6PcMImXFn53d3M-2bYKny5r4h63_VImNXxO1maLFw1MQnVZS6tWtthNF&__tn__=%2CO%2CP-R