More

  ರಾಹುಲ್ ಗಾಂಧಿಗೆ ಸೋಲಿನ ಕನಸು

  ಹುಬ್ಬಳ್ಳಿ: ಕಾಂಗ್ರೆಸ್‌ನವರಿಗೆ ಚುನಾವಣಾ ಆಯೋಗ, ಇವಿಎಂ ಯಂತ್ರಗಳ ಮೇಲೆ ನಂಬಿಕೆ ಇಲ್ಲ. ತಾವು ಗೆದ್ದರೆ ಅನುಮಾನ ಬರುವುದಿಲ್ಲ. ಒಟ್ಟಾರೆಯಾಗಿ ರಾಹುಲ್ ಗಾಂಧಿಗೆ ಸೋಲಿನ ಕನಸು ಬೀಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
  ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಸೋಲುತ್ತೇವೆ ಎನ್ನುವುದು ಗೊತ್ತಾಗಿದೆ. ಇಂಡಿ ಒಕ್ಕೂಟದಿಂದ ಕೇವಲ 40 ಸೀಟ್ ಬರುತ್ತವೆ ಎನ್ನುತ್ತಿದ್ದಾರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಕಳೆದ ಬಾರಿಗಿಂತ ಅವರು ಲೋಕಸಸಭಾ ಚುನಾವಣೆಯಲ್ಲಿ ಕಡಿಮೆ ಸೀಟ್ ಬರುವುದು ಗೊತ್ತಾಗಿದೆ ಎಂದು ಕುಟುಕಿದರು.
  ನಾವು ಕರ್ನಾಟಕದಲ್ಲಿ ಸೋತರೂ ಸುಮ್ಮನೆ ಕೂತಿದ್ದೇವೆ. ಆದರೆ, ಅವರಿಗೆ ಈಗ ಅನುಮಾನ ಶುರುವಾಗಿದೆ. ಕಾಂಗ್ರೆಸ್ ತನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಬಹಳ ಬದಲಾವಣೆ ಆಗಿದೆ. ಆದರೆ, ಕಾಂಗ್ರೆಸ್‌ನವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts