PHOTOS| ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ ತುಪ್ಪದ ಬೆಡಗಿ ರಾಗಿಣಿ

ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಸಾಂಪ್ರದಾಯಿಕ ಲುಕ್​​ನಲ್ಲಿ ಕಾಣಿಸಿಕೊಂಡಿರುವ ನೂತನ ಫೋಟೋಶೂಟ್​ ಅಭಿಮಾನಿಗಳ ಮನಸೂರೆಗೊಳಿಸಿದೆ.

ಪಿಂಕ್​ ಬಣ್ಣದ​​ ರೇಷ್ಮೆ​ ಸೀರೆಯ ಜತೆಗೆ ಮ್ಯಾಚಿಂಗ್​​ ಒಡವೆ ಧರಿಸಿ, ಕ್ಯಾಮೆರಾ ಕಣ್ಣಿಗೆ ಪೋಸ್​ ನೀಡಿರುವ ರಾಗಿಣಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಂದಿನ ಮಹಿಳೆ ಎಂದು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ರಾಗಿಣಿ, ಇದೊಂದು ಅದ್ಭುತ ಹಾಗೂ ವಿಶೇಷ ಮೋಜಿನ ಫೋಟೋಶೂಟ್​ ಎಂದು ಬಣ್ಣಿಸಿದ್ದಾರೆ. ರಾಗಿಣಿ ಅವರ ಸಾಂಪ್ರದಾಯಿಕ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)