More

    ಸ್ಟಾರ್ ಸಂಭ್ರಮ 2020: ಕೆಲಸದಿಂದಲೇ ಹೊಸ ವರ್ಷಕ್ಕೆ ಸ್ವಾಗತ

    ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ. 

    ನಾನು ಪ್ರತಿವರ್ಷವನ್ನೂ ಕೆಲಸದ ಮೂಲಕವೇ ಸ್ವಾಗತಿಸುತ್ತೇನೆ. ಹಾಗೆಯೇ ಈ ವರ್ಷವನ್ನು ಕೂಡ. ಹೊಸ ವರ್ಷದ ಆರಂಭದಂದು ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ವಾಗತಿಸುತ್ತಿದ್ದೇನೆ.

    ಕೆಲಸದ ಮೂಲಕ ಸ್ವಾಗತಿಸಿದ ವರ್ಷ ಚೆನ್ನಾಗಿರುತ್ತದೆ ಎಂಬ ಭಾವನೆ ನನ್ನದು. ಹಾಗಾಗಿ ಹೊಸ ವರ್ಷಕ್ಕೆ ಹಲವರು ಹಾಲಿಡೇ ಟ್ರಿಪ್ ಹೋದರೆ ನಾನು ಹೊಸ ವರ್ಷದ ಆರಂಭದಲ್ಲಿ ಒಂದಷ್ಟು ಕೆಲಸಗಳನ್ನು ಮುಗಿಸಿಕೊಂಡು, 2 ಅಥವಾ 3ನೇ ವಾರದಲ್ಲಿ ಪ್ರವಾಸಕ್ಕೆ ಹೋಗುತ್ತೇನೆ. ಈ ವರ್ಷ ತುಂಬ ಬಿಜಿಯಾಗಿದ್ದೆ, ವರ್ಷವೂ ಒಳ್ಳೆಯ ರೀತಿಯಲ್ಲೇ ಮುಗಿಯುತ್ತಿದೆ.

    ನಾನು ರೆಸೊಲ್ಯುಷನ್ ಅಂತೆಲ್ಲ ತೆಗೆದುಕೊಳ್ಳುವುದಿಲ್ಲ. ವರ್ಷಾಂತ್ಯ ಚೆನ್ನಾಗಿದ್ದರೆ ಹೊಸ ವರ್ಷದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಎಂಬ ನಂಬಿಕೆ ನನ್ನದು.

    | ರಾಗಿಣಿ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts