ರಾಯರ ರಥವನೆಳೆದ ಉತ್ತರಾದಿ ಶ್ರೀಗಳು

ಕಲಬುರಗಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಭವ್ಯ ರಥೋತ್ಸವ ನೆರವೇರಿತು. ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಭವ್ಯ ವೈಭವಕ್ಕೆ ಸಾಕ್ಷಿಯಾದರು. ಎಲ್ಲ ಮಠಗಳಲ್ಲಿ ರಾಯರ ಭಕ್ತರು ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು. ರಾಯರ ಸ್ತ್ರೋತ್ರ, ಜಯಘೋಷಗಳೊಂದಿಗೆ ಭಕ್ತರು ಆರಾಧನೆಯಲ್ಲಿ ಭಾಗವಹಿಸಿದ್ದರು.
ಬ್ರಹ್ಮಪುರ ಮಠ: ಶ್ರೀ ರುಕ್ಮಿಣಿ ಪಾಂಡುರಂಗ ಮಂದಿರ ಉತ್ತರಾದಿ ಮಠದಲ್ಲಿ ಬೆಳಗ್ಗೆ ಶ್ರೀ ಸತ್ಯಾಥ್ಮ ತೀರ್ಥರ ಸಾನ್ನಿಧ್ಯದಲ್ಲಿ ದಿಗ್ವಿಜಯ ಮೂಲ ರಾಮದೇವರ ಪೂಜೆ, ರಾಯರ ಅಷ್ಟೋತ್ತರ, ರಥಾಂಗ ಹೋಮ. ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ, ಅಭಿಷೇಕ, ಮಹಾಪೂಜೆ ಕಾರ್ಯಕ್ರಮ ಜರುಗಿದವು. ಮಹಿಳಾ ಭಜನಾ ಮಂಡಳಿ ಸದಸ್ಯೆಯರ ಕೋಲಾಟ ಗಮನ ಸೆಳೆಯಿತು.
ಪಂ.ರಂಗಾಚಾರ್ಯ ಗುತ್ತಲ, ಉತ್ತರಾದಿ ಮಠದ ದಿವಾನ ಪಂ.ಶಶಿ ಆಚಾರ್ಯ, ಪಂ. ವಿನೋದಾಚಾರ್ಯ ಗಲಗಲಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ.ಡಾ.ಗುರುಮಧ್ವಾಚಾರ್ಯ ನವಲಿ, ಪಂ. ಪ್ರಸನ್ನಾಚಾರ್ಯ ಜೋಶಿ, ಘಂಟಿ ರಾಮಾಚಾರ್ಯ, ಆನಂದತೀಥರ್ಾಚಾರ, ಅರ್ಚಕ ನರಸಿಂಹಾಚಾರ್ಯ, ವಿನೂತ ಕುಲಕಣರ್ಿ, ರಘೋತ್ತಮ ಘಂಟಿ, ಜಯತೀರ್ಥ ಜೋಶಿ, ಸೇರಿದಂತೆ ಸತ್ಯಾತ್ಮ ಸೇನೆ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಜೇವಗರ್ಿ ಕಾಲನಿ ಮಠ: ಬೆಳಗ್ಗೆ ಕ್ಷೀರಾಭಿಷೇಕ, ರಥಾಂಗ ಹೋಮ, ಶ್ರೀ ಸತ್ಯಾತ್ಮತೀರ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಬೀದಿಯಲ್ಲಿ ರಥೋತ್ಸವ ಸಂಭ್ರಮದಿಂದ ನೆರವೇರಿತು. ಅಷ್ಟಾವಧಾನ ಸೇವೆ. ಸಂಜೆ ದಾಸವಾಣಿ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಪಂ.ಗಿರೀಶಾಚಾರ್ಯ, ಪಂ ಗೋಪಾಲಾಚಾರ್ಯ ಅಕಮಂಚಿ, ಸಂಜೀವಾಚಾರ್ಯ, ವೆಂಕಟರಾವ ಜೋಗೂರ, ವಾಸುದೇವರಾವ ಮುಂಡರಗಿ, ವಿಜಯಕುಮಾರ ಕುಲಕಣರ್ಿ, ಪ್ರಸಾದ ಹರಿದಾಸ, ಪ್ರಶಾಂತ ಕೊರಳ್ಳಿ, ಪ್ರಹ್ಲಾದ ಮಟಮಾರಿ, ಜಯತೀರ್ಥ ಜೋಶಿ, ರವಿ ಲಾತೂರಕರ, ಅರವಿಂದ ನವಲಿ, ಮಾಧವರಾವ ತಾವರಗೇರಾ, ವಾಮನರಾವ ಕುಲಕಣರ್ಿ, ಭಕ್ತರು ಪಾಲ್ಗೊಂಡಿದ್ದರು.
ಬಿದ್ದಾಪುರ ಕಾಲನಿ
ಮಂತ್ರಾಲಯ ಮಠದ ಶಾಖಾ ಮಠದಲ್ಲಿ ರಾಯರ ಮಧ್ಯಾರಾಧನೆ ನಿಮಿತ್ತ ಶ್ರೀ ಸತ್ಯಾತ್ಮ ತೀರ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಿಳಾ ಭಜನಾ ಮಂಡಳಿ ಸದಸ್ಯೆಯರು ದಾಸರ ಹಾಡು ಹಾಡುತ್ತ ಮುಂದೆ ಸಾಗಿದರು. ಸಕಲ ವಾದ್ಯಗಳೊಂದಿಗೆ ರಥೋತ್ಸವ ನಡೆಯಿತು.
ನಂತರ ರಾಯರ ವೃಂದಾವನಕ್ಕೆ ವಿಶೇಷ ಅಭಿಷೇಕ, ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನಡೆದವು.
ಜಗತ್ ಬಡಾವಣೆ: ಇಲ್ಲಿನ ರಾಯರ ಮಠದಲ್ಲಿ ಪಲ್ಲಕ್ಕಿ ಮಹೋತ್ಸವ ಜರುಗಿತು. ನರಹರಿ ಪಾಟೀಲ್, ರಾಘವೇಂದ್ರ ಕುಲಕಣರ್ಿ, ಪ್ರಕಾಶ ಕುಲಕಣರ್ಿ ಸರಡಗಿ ಸಂಜೀವಕುಮಾರ ಜವಳಗಿ ಪಾಲ್ಗೊಂಡದ್ದರು.