ರಾಹುಲ್​ರನ್ನು ಕರ್ನಾಟಕದಿಂದ ಕಣಕ್ಕಿಳಿಸುವ ಕಾಂಗ್ರೆಸ್​ನ #RaGaFromKarnataka ಅಭಿಯಾನ ಟ್ರೆಂಡಿಂಗ್​

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್​ ಸಂಕಲ್ಪ ಮಾಡಿದೆ.

“ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುವ ಮೂಲಕ ಅಭಿವೃದ್ಧಿಯ ರಾಯಭಾರಿಯಾಗಬೇಕು,” ಎಂದು ಸಿದ್ಧರಾಮಯ್ಯ ಟ್ವೀಟ್​ ಮಾಡಿ ಮನವಿ ಮಾಡುತ್ತಲೇ ರಾಜ್ಯ ಕಾಂಗ್ರೆಸ್​ #RaGaFromKarnataka ಆ್ಯಷ್​ ಟ್ಯಾಗ್​ ಅಡಿಯಲ್ಲಿ ಟ್ವಿಟರ್​ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಆರಂಭಿಸಿದೆ. ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​, ಎಂಬಿ ಪಾಟೀಲ್​, ಕರ್ನಾಟಕ ಕಾಂಗ್ರೆಸ್​, ರಿಜ್ವಾನ್​ ಅರ್ಷದ್ ಸೇರಿ ರಾಜ್ಯದ ಹಲವು ನಾಯಕರು ಈ ಆ್ಯಷ್​ ಟ್ಯಾಗ್​ ಅಡಿಯಲ್ಲಿ ಟ್ವೀಟ್​ ಮಾಡಿ ಒತ್ತಾಯ ಮಾಡಿದ್ದಾರೆ.

ಈ ಅಭಿಯಾನ ಈಗ ಸಾಮಾಜಿಕ ತಾಣಗಳಲ್ಲಿ ಟ್ರೆಂಡಿಂಗ್​ ಆಗಿದೆ. ಟ್ವಿಟರ್​ನಲ್ಲಿ ಈಗಾಗಲೇ ಟಾಪ್​ ಟ್ರೆಂಡಿಂಗ್​ನ ಮೂರನೇ ಸ್ಥಾನದಲ್ಲಿದೆ.