ಕನ್ನಡ್ ಗೊತ್ತಿಲ್ಲ ಅಂದರೆ ಸುಮ್ನೆ ಬಿಡಲ್ಲ

ಬೆಂಗಳೂರು: ನಿನ್ನೆ ಮೊನ್ನೆ ಶುರುವಾದಂತೆ ಭಾಸವಾಗಿದ್ದ ‘ಕನ್ನಡ್ ಗೊತ್ತಿಲ್ಲ’ ಚಿತ್ರದ ಶೂಟಿಂಗ್ ಸದ್ದಿಲ್ಲದೆ ಮುಕ್ತಾಯಗೊಂಡಿದೆ. ಈ ಮೂಲಕ ಕುಂಬಳಕಾಯಿ ಒಡೆಯುವ ಕಾರ್ಯಕ್ರಮವನ್ನು ಮುಗಿಸಿಕೊಂಡಿರುವ ಚಿತ್ರತಂಡ, ಚಿತ್ರೀಕರಣೋತ್ತರಕೆಲಸಗಳಿಗೆ ಚಾಲನೆ ನೀಡಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು ಪಕ್ಕಾ ನಾಡು, ನುಡಿಗೆ ಸಂಬಂಧಿಸಿದ ಸಿನಿಮಾ. ಜತೆಗೆ ಥ್ರಿಲ್ಲರ್ ಅಂಶಗಳನ್ನೂ ನಿರ್ದೇಶಕ ಆರ್​ಜೆ ಮಯೂರ್ ರಾಘವೇಂದ್ರ ಬೆರೆಸಿದ್ದಾರೆ

ಇನ್ನು, ಹರಿಪ್ರಿಯಾ ನಟಿಸುತ್ತಿರುವ ಇತ್ತೀಚಿನ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನ. ‘ಬೆಲ್​ಬಾಟಂ’ನಲ್ಲಿ ಒಂದು ಥರ ಕಾಣಿಸಿಕೊಂಡರೆ, ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ‘ಕನ್ನಡ್ ಗೊತ್ತಿಲ್ಲ’ ಸಿನಿಮಾದಲ್ಲಿ ಶ್ರುತಿ ಚಕ್ರವರ್ತಿಯಾಗಿ ಎದುರಾಗಲಿದ್ದು, ಕೈಯಲ್ಲಿ ಗನ್ ಹಿಡಿದುಕೊಂಡು ಹೊಸ ಗೆಟಪ್ ಅವರಿಗಿದೆ.

‘ಸಾಮಾನ್ಯವಾಗಿ ಚಿತ್ರದ ಶೀರ್ಷಿಕೆ ನೋಡಿದರೆ, ಕನ್ನಡ ನಾಡು, ನುಡಿ ಬಗ್ಗೆಯೇ ಪಾಠ ಮಾಡಲಿದ್ದಾರೆ ಎಂದುಕೊಳ್ಳಬೇಡಿ. ನಮ್ಮ ಸುತ್ತ ನಡೆಯುವ ಕೆಲ ವಿಷಯಗಳನ್ನು ಆಯ್ದುಕೊಂಡು ಅದನ್ನು ರ್ಚಚಿಸುವ ಪ್ರಯತ್ನ ಚಿತ್ರದಲ್ಲಾಗಿದೆ. ನಾವಿಲ್ಲಿ ಯಾರಿಗೂ ಬೋಧನೆ ಮಾಡಲು

ಹೋಗಿಲ್ಲ. ಎಲ್ಲವನ್ನೂ ಮನರಂಜನೆ ಉದ್ದೇಶಕ್ಕಾಗಿ ಮಾಡಿದ್ದೇವೆ. ಕನ್ನಡಕ್ಕೆ ಇದೊಂದು ಹೊಸ ಪ್ರಯತ್ನ. ಕನ್ನಡ ಪ್ರತಿನಿಧಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ಹರಿಪ್ರಿಯಾ.

ಈ ಕಥೆ ಬೆಂಗಳೂರಿಗೆ ಸಂಬಂಧಿಸಿದ್ದರಿಂದ ಚಿತ್ರದ ಬಹುಪಾಲು ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದೆ. ‘ಬೆಂಗಳೂರಿನಲ್ಲಿ ಕನ್ನಡ ಗೊತ್ತಿಲ್ಲದವರ ಸಂಖ್ಯೆ ಹೆಚ್ಚಿದೆ. ಆ ಅಂಶವನ್ನಿಟ್ಟುಕೊಂಡು ‘ಕನ್ನಡ್ ಗೊತ್ತಿಲ್ಲ’ ಎಂಬ ಸಿನಿಮಾ ಮಾಡುವ ಪ್ಲಾ್ಯನ್ ಬಂತು. ಕನ್ನಡಕ್ಕಿಂತ ಇತರೆ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿರುವುದರಿಂದ ಅದನ್ನೇ ಕಥೆ ಮಾಡಿದೆ. ಇದೀಗ ಚಿತ್ರೀಕರಣವೂ ಮುಗಿದಿದೆ ’ ಎನ್ನುತ್ತಾರೆ ನಿರ್ದೇಶಕ ಮಯೂರ್.

ಕುಮಾರ್ ಕಂಠೀರವ ನಿರ್ವಣದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದಾರೆ. ರೋಹಿತ್ ಪದಕಿ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಮತ್ತು ಸಂಕಲನ ನಿಭಾಯಿಸಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಚಿತ್ರ ತೆರೆಕಾಣಿಸುವುದು ನಿರ್ದೇಶಕರ  ಪ್ಲ್ಯಾನ್​.