ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು

ನವದೆಹಲಿ: ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧವಿಮಾನಗಳು ಈ ವರ್ಷದ ಸೆಪ್ಟೆಂಬರ್​ ವೇಳೆಗೆ ಭಾರತೀಯ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಈ ವಿಷಯ ತಿಳಿಸಿದರು.

ಕೇಂದ್ರ ಸರ್ಕಾರ ಭಾರತೀಯ ವಾಯುಪಡೆಯನ್ನು ಸಮಗ್ರವಾಗಿ ಸುಧಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧವಿಮಾನಗಳು ಮತ್ತಿತರ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ. ಇದರ ಭಾಗವಾಗಿ ಫ್ರಾನ್ಸ್​ನ ಡಸಾಲ್ಟ್​​ ಏವಿಯೇಷನ್​ ನಿರ್ಮಿತ 36 ರಫೇಲ್​ ಯುದ್ಧವಿಮಾನಗಳನ್ನು ಖರೀದಿಸಲಾಗುತ್ತಿದೆ. (ಏಜೆನ್ಸೀಸ್​)