More

    ಸ್ಪೇನ್-ಸೆರ್ಬಿಯಾ ಫೈನಲ್; ರಾಫೆಲ್ ನಡಾಲ್-ನೊವಾಕ್ ಜೋಕೊವಿಕ್ ಮುಖಾಮುಖಿ

    ಸಿಡ್ನಿ: ಚೊಚ್ಚಲ ಆವೃತ್ತಿಯ ಎಟಿಪಿ ಕಪ್ ಟೀಮ್ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ ವಿಶ್ವ ನಂ.1 ರಾಫೆಲ್ ನಡಾಲ್ ಹಾಗೂ ವಿಶ್ವ ನಂ.2 ನೊವಾಕ್ ಜೋಕೊವಿಕ್ ಮುಖಾಮುಖಿಯಾಗಲಿದ್ದಾರೆ. ಸ್ಪೇನ್ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ಹಂತಕ್ಕೇರಿದರೆ, ಸೆರ್ಬಿಯಾ ತಂಡ ರಷ್ಯಾವನ್ನು ಮಣಿಸಿ ಫೈನಲ್​ಗೇರಿತು. ಸೆರ್ಬಿಯಾ ಹಾಗೂ ಸ್ಪೇನ್ ಸೆಮಿಫೈನಲ್​ನಲ್ಲಿ 3-0 ಗೆಲುವು ಕಂಡವು.

    ಎಟಿಪಿಯ ಹೊಸ ಮಾದರಿಯ ಟೂರ್ನಿ ಈಗಾಗಲೇ ಜಗತ್ತಿನ ಗಮನಸೆಳೆಯುವಲ್ಲಿ ಯಶ ಕಂಡಿದ್ದು, ಮೊದಲ ಆವೃತ್ತಿಯ ಫೈನಲ್​ನಲ್ಲಿ ವಿಶ್ವದ ಅಗ್ರ ಎರಡು ಆಟಗಾರರ ದೇಶಗಳೇ ಫೈನಲ್​ನಲ್ಲಿ ಮುಖಾಮುಖಿಯಾಗಲಿರುವುದು ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. 2006ರಲ್ಲಿ ಮೊದಲ ಬಾರಿಗೆ ಟೆನಿಸ್ ಕಣದಲ್ಲಿ ಮುಖಾಮುಖಿಯಾಗಿದ್ದ ನಡಾಲ್ ಹಾಗೂ ಜೋಕೊವಿಕ್, ವೃತ್ತಿಪರ ಟೆನಿಸ್​ನಲ್ಲಿ 55ನೇ ಪಂದ್ಯದಲ್ಲಿ ಭಾನುವಾರ ಎದುರಾಗಲಿದ್ದಾರೆ. ನೊವಾಕ್ ಜೋಕೊವಿಕ್ 6-1, 5-7, 6-4 ರಿಂದ ರಷ್ಯಾದ ಡೆನಿಲ್ ಮೆಡ್ವೆಡೆವ್​ರನ್ನು ಸೋಲಿಸಿದರೆ, ಇದಕ್ಕೂ ಮುನ್ನ ದುಸಾನ್ ಲಾಜೋವಿಕ್ ಕರೇನ್ ಕಚನೋವ್​ರನ್ನು ಸೋಲಿಸಿದ್ದರು. ಡಬಲ್ಸ್ ಪಂದ್ಯದಲ್ಲಿ ನಿಕೋಲಾ ಕ್ಯಾಸಿಕ್, ವಿಕ್ಟರ್ ಟ್ರಯೋಕ್ಕಿ ಜೋಡಿ ಸುಲಭ ಜಯ ಸಾಧಿಸಿತ್ತು.

    ಸ್ಪೇನ್ ಪರವಾಗಿ ರಾಬಟೋ ಬುಟಿಸ್ಟಾ 6-1, 6-4 ರಿಂದ ನಿಕ್ ರ್ಕಿಗಿಯೋಸ್​ರನ್ನು ಸೋಲಿಸಿದರೆ, ನಡಾಲ್ 6-4, 5-7, 6-1 ರಿಂದ ಅಲೆಕ್ಸ್ ಡಿ ಮಿನ್ಯುರ್​ರನ್ನು ಮಣಿಸಿದರು. ಅಂತಿಮ ಡಬಲ್ಸ್ ಪಂದ್ಯದಲ್ಲಿ ಕರೇನೋ ಬುಸ್ಟಾ ಹಾಗೂ ಫೆಲಿಸಿಯಾನೋ ಲೋಪಜ್ ಜೋಡಿ 6-2, 7-6 ರಿಂದ ಕ್ರಿಸ್ ಗುಕ್ಕೋಯಿನ್ ಹಾಗೂ ಜಾನ್ ಪೀರ್ಸ್ ಜೋಡಿಯನ್ನು ಮಣಿಸಿತು.

    ಆಸ್ಟ್ರೇಲಿಯನ್ ಓಪನ್​ಗಿಲ್ಲ ಆಂಡ್ರೆಸ್ಕು

    ಮೆಲ್ಬೋರ್ನ್: ಯುಎಸ್ ಓಪನ್ ಚಾಂಪಿಯನ್ ಕೆನಡದ ಯುವ ಆಟಗಾರ್ತಿ ಬಿಯಾಂಕ ಆಂಡ್ರೆಸ್ಕು ವರ್ಷದ ಮೊದಲ ಗ್ರಾ್ಯಂಡ್ ಸ್ಲಾಂ ಟೂರ್ನಿ ಆಸ್ಟ್ರೇಲಿಯನ್ ಓಪನ್​ನಿಂದ ಹಿಂದೆ ಸರಿದಿದ್ದಾರೆ. ಮೊಣಕಾಲು ಗಾಯದಿಂದ ಚೇತರಿಕೆ ಕಾಣಲು ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.

    ಕಳೆದ ವರ್ಷದ ಅಂತ್ಯದಲ್ಲಿ 19 ವರ್ಷ ಆಂಡ್ರೆಸ್ಕು ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ‘ಮೆಲ್ಬೋರ್ನ್ ನಲ್ಲಿ ಆಡಲು ನನಗೆ ಇಷ್ಟ. ಆದರೆ, ಕಠಿಣ ನಿರ್ಧಾರ ಮಾಡಬೇಕಾದ ಸಮಯ ಬಂದಿದೆ. ಗಾಯದ ಬಗ್ಗೆ ಗಮನ ನೀಡಬೇಕಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts