ಬಾಲ್​ ಬಾಯ್​ ಕನಸು ನನಸು ಮಾಡಿದ ರಾಫೆಲ್​ ನಡಾಲ್​

ಪ್ಯಾರಿಸ್​: ವಿಶ್ವದ ನಂಬರ್​ 1 ಟೆನಿಸ್​ ಆಟಗಾರ ರಾಫೆಲ್​ ನಡಾಲ್​ ಫ್ರೆಂಚ್​ ಓಪನ್ಸ್​ ಟೈಟಲ್​ ಅನ್ನು​ ಮತ್ತೊಮ್ಮೆ ತಮ್ಮದಾಗಿಸಿಕೊಳ್ಳಲು ಪ್ರಯತ್ನ ಮುಂದುವರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಪುಟಾಣಿ ಅಭಿಮಾನಿಯೊಬ್ಬನ ಕನಸನ್ನು ನನಸು ಮಾಡಿ ಜನರ ಮನಸನ್ನು ಗೆದ್ದಿದ್ದಾರೆ.

ಫ್ರೆಂಚ್​ ಓಪನ್ಸ್​ನ ನಾಲ್ಕನೇ ಸುತ್ತಿನ ಪಂದ್ಯವನ್ನು ರಿಚರ್ಡ್​ ಗಾಸ್ಕೆಟ್​ ವಿರುದ್ಧ 6-3, 6-2, 6-2 ನೇರ ಸೆಟ್​ಗಳ ಅಂತರದಲ್ಲಿ ಗೆದ್ದ ನಂತರ ಅವರ ಅಭಿಮಾನಿಯ ಕನಸು ಈಡೇರಿಸುವಲ್ಲಿಯೂ ನಡಾಲ್​ ಯಶಸ್ವಿಯಾಗಿದ್ದಾರೆ.

ನಿಮಗೆ ವಿಶ್ವದಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. ಆದರೆ ಪ್ರಸ್ತುತ ನಿಮ್ಮ ದೊಡ್ಡ ಅಭಿಮಾನಿಯೊಬ್ಬರು ಇಲ್ಲೇ ಇದ್ದಾರೆ. ಆತ ಇಲ್ಲೇ ಬಾಲ್​ ಬಾಯ್​ ಆಗಿದ್ದು, ಆತನಿಗೆ ನಿಮ್ಮ ವಿರುದ್ಧ ಒಂದೇ ಒಂದು ಬಾರಿ ಟೆನಿಸ್​ ಆಡುವ ಆಸೆಯಿದೆ ಎಂದು ಪಂದ್ಯದ ನಂತರ ಸಂದರ್ಶಕಿ ನಡಾಲ್​ಗೆ ಅವರ ಪುಟಾಣಿ ಅಭಿಮಾನಿಯ ಕುರಿತು ಹೇಳುತ್ತಾರೆ.

ತಕ್ಷಣ ನಡಾಲ್​ ತನ್ನ ಕಿಟ್​ ಬಳಿ ಹೋಗಿ ಎರಡು ರಾಕೆಟ್​ ತಂದು ಒಂದು ರಾಕೆಟ್​ ಅನ್ನು ಅಭಿಮಾನಿಗೆ ಕೊಟ್ಟು ಆಟವಾಡಲು ಕೋರ್ಟ್​ಗೆ ಇಳಿಯುತ್ತಾರೆ. ಬಾಲಕನ ಜತೆ ಆಟಕ್ಕಿಳಿದ ನಡಾಲ್​ ನಿಧಾನವಾಗಿ ರ್ಯಾಲಿ ಆರಂಭಿಸಿ ಆಟವಾಡಿ ತನ್ನ ಅಭಿಮಾನಿಯ ಕನಸು ಈಡೇರಿಸುತ್ತಾರೆ. ನಡಾಲ್​ ವಿರುದ್ಧ ಆಟವಾಡುವಾಗ ಬಾಲಕನ ಬ್ಯಾಕ್​ಹ್ಯಾಂಡ್​ ಮತ್ತು ಪೋರ್​ಕ್ಯಾಂಡ್​ ಕೌಶಲಗಳಿಗೆ ನೆರೆದಿದ್ದ ಜನರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡಿದರು.

https://twitter.com/TSNTennis/status/1002937683608506368

ನಡಾಲ್​ ಎದುರಾಳಿ ಜತೆ ಆಟವಾಡಿ ಪಂದ್ಯ ಗೆಲ್ಲುವುದು ಒಂದೆಡೆಯಾದರೆ, ತನ್ನ ಅಭಿಮಾನಿ ವಿರುದ್ಧ ಆಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *