ರಾಧಿಕಾ ಪಂಡಿತ್​, ಯಶ್​ರಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮಗಳ ಮುಖವನ್ನು ತೋರಿಸಲು ದಿನಾಂಕ ನಿಗದಿ

ಬೆಂಗಳೂರು: ತಾರಾ ಜೋಡಿಯಾದ ರಾಕಿಂಗ್​​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್ ಅವರ ಅಭಿಮಾನಿಗಳ ಬಯಕೆಯೊಂದೇ, ಅದು ಅವರ ಮುದ್ದಾದ ಮಗಳ ಮುಖವನ್ನು ಬಹಿರಂಗ ಪಡಿಸಬೇಕೆಂಬುದು. ಅದಕ್ಕೆ ಇನ್ನೇನು ಕಾಲ ಕೂಡಿ ಬಂದಿದೆ.

ಹೌದು, ಕೊನೆಗೂ ರಾಧಿಕಾ ಪಂಡಿತ್​ ಅವರು ತಮ್ಮ ಮಗಳ ಮುಖವನ್ನು​ ತೋರಿಸಲು ದಿನಾಂಕ ನಿಗದಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಶ್​ ಅವರ ಮುಖವನ್ನು ಮಗಳು ತನ್ನ ಕೈಯಿಂದ ಮುಟ್ಟುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿರುವ ರಾಧಿಕಾ, ಬೆಲೆ ಕಟ್ಟಲಾಗದ ಸಂಬಂಧಗಳಲ್ಲಿ ತಂದೆ ಮತ್ತು ಮಗಳ ಸಂಬಂಧವೂ ಒಂದು ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ನನಗೆ ಗೊತ್ತು ಎಲ್ಲರೂ ನಮ್ಮ ಚಿಕ್ಕ ದೇವತೆಯನ್ನು ಎದುರು ನೋಡಲು ಕಾತರಾಗಿದ್ದೀರಾ, ನಾವು ನಿಮಗೆ ನಿರಾಶೆ ಮಾಡುವುದಿಲ್ಲ. ಇದೇ ಮೇ ತಿಂಗಳ 7 ರ ಅಕ್ಷಯ ತೃತೀಯ ದಿನದಂದು ನಮ್ಮ ನಿಜವಾದ ನಿಧಿಯನ್ನು ಬಹಿರಂಗಪಡಿಸುತ್ತೇವೆ. ಅದೇ ನಮ್ಮ ಅಮೂಲ್ಯವಾದ ಆಸ್ತಿ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದಾರೆ.

ರಾಧಿಕಾ ಅವರು ಪೋಸ್ಟ್​ ಮಾಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈಗಾಗಲೇ 372 ಶೇರ್​ ಆಗಿದ್ದು, 700ಕ್ಕೂ ಹೆಚ್ಚು ಮಂದಿ ಕಾಮೆಂಟ್ಸ್​ ಮಾಡಿದ್ದು, ಮುದ್ದಾದ ಮಗುವನ್ನು ಎದುರು ನೋಡುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

A father daughter relationship is a priceless one!! I know all of u are waiting to see our lil angel, won't disappoint…

Radhika Pandit ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 5, 2019

Leave a Reply

Your email address will not be published. Required fields are marked *