More

    ಮಕ್ಕಳೊಂದಿಗಿನ ಫೋಟೋ ಶೇರ್​ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ತಾರಾ ದಂಪತಿ ಯಶ್​-ರಾಧಿಕಾ ಪಂಡಿತ್​

    ಬೆಂಗಳೂರು: ಸ್ಯಾಂಡಲ್​ವುಡ್​ ತಾರಾ ದಂಪತಿ ಯಶ್​ ಹಾಗೂ ರಾಧಿಕಾ ಪಂಡಿತ್​ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯ ಕೋರಿದ್ದಾರೆ.

    ನಟಿ ರಾಧಿಕಾ ಪಂಡಿತ್​ ಇನ್ಸ್ಟಾಗ್ರಾಂನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಇರುವ ಫೋಟೋ ಪೋಸ್ಟ್​ ಮಾಡಿ, ನನ್ನ ಕುಟುಂಬದಿಂದ ನಿಮ್ಮೆಲ್ಲರಿಗೂ 2020-ಹೊಸವರ್ಷದ ಶುಭಾಶಯಗಳು ಎಂದು ಕ್ಯಾಪ್ಷನ್ ಬರೆದಿದ್ದಾರೆ. ಈ ಫೋಟೋದಲ್ಲಿ ಯಶ್​ ಅವರು ಆಯ್ರಾಳನ್ನು ಎತ್ತಿಕೊಂಡಿದ್ದರೆ, ರಾಧಿಕಾ ಪಂಡಿತ್​ ಮಗನನ್ನು ಎತ್ತಿಕೊಂಡಿರುವುದನ್ನು ನೋಡಬಹುದು.

    ನಟ ಯಶ್​ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳು ಆಯ್ರಾಳೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ಎಂದು ಹಾರೈಸಿದ್ದಾರೆ.

    ಈ ಜೀವನವನ್ನು ಒಂದು ಮಗು ಹೇಗೆ ನೋಡುತ್ತದೆಯೋ ಹಾಗೇ ನೋಡುವ ಮೂಲಕ ವರ್ಷವನ್ನು ಪ್ರಾರಂಭಿಸಬೇಕು. ಮಕ್ಕಳು ಚಿಕ್ಕಚಿಕ್ಕ ವಿಷಯಗಳಲ್ಲಿ ಸಂತೋಷ ಕಾಣುವಂತೆ, ಸಣ್ಣ ವಿಚಾರಕ್ಕೂ ಉತ್ಸಾಹ ಭರಿತರಾಗುವಂತೆ, ಅವರಷ್ಟೇ ಮುಗ್ಧರಾಗಿ ಜೀವನ ಸಾಗಿಸಬೇಕು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts