More

    ಇನ್ನೂ ಮದುವೆ ನಿಶ್ಚಯ ಆಗಿಲ್ಲ; ಖಚಿತ ಪಡಿಸಿದ ರಚಿತಾ ರಾಮ್​

    ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರನ್ನು ರಚಿತಾ ರಾಮ್ ಮದುವೆ ಆಗುತ್ತಿದ್ದಾರಾ?’ ಇಂಥದ್ದೊಂದು ಪ್ರಶ್ನೆ ಒಂದು ವರ್ಷದಿಂದ ಆಗಾಗ ಕೇಳಿ ಬರುತ್ತಲೇ ಇತ್ತು. ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಅವರ ಮದುವೆ ಇತ್ತೀಚೆಗಷ್ಟೇ ನಡೆದಿದ್ದು, ಈ ಸಮಾರಂಭದಲ್ಲಿ ಚಿತ್ರರಂಗದ ಕಡೆಯಿಂದ ಕಾಣಿಸಿಕೊಂಡ ಏಕೈಕ ಸೆಲೆಬ್ರಿಟಿ ಎಂದರೆ ಅದು ನಿಖಿಲ್.

    ನ್ನು ಇತ್ತೀಚೆಗೆ ಶೃಂಗೇರಿಯಲ್ಲೂ ನಿಖಿಲ್ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಇದೆಲ್ಲದರಿಂದ ಅವರಿಬ್ಬರೂ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಯೊಂದು ಹರಡಿತ್ತು. ಆದರೆ, ಅದೊಂದು ಸುಳ್ಳು ಸುದ್ದಿ ಮತ್ತು ಅದನ್ನು ನಂಬಬೇಡಿ ಎಂದು ರಚಿತಾ ಮನವಿ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ರಚಿತಾ ರಾಮ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ. ತಮ್ಮ ಮದುವೆ ಸುದ್ದಿ ಕೇವಲ ವದಂತಿಯೇ ಹೊರತು ನಿಜವಲ್ಲ ಎಂದು ಆ ಮೂಲಕ ಸ್ಪಷ್ಟಪಡಿಸಿದ್ದಾರೆ. ‘ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ವದಂತಿಗಳ ಬಗ್ಗೆ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲೀ ಅಥವಾ ವೈಯಕ್ತಿಕ ವಿಷಯಗಳಾಗಲೀ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದನ್ನು ಸತ್ಯವೆಂದು ಪರಿಗಣಿಸಿ. ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿ ಉಂಟಾಗಬಹುದು. ಆದರೆ, ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ. ಅತಿ ಮುಖ್ಯವಾದ ಸಂಗತಿ ಏನೆಂದರೆ, ಸದ್ಯಕ್ಕೆ ನನಗೆ ಮದುವೆ ನಿಶ್ಚಯವಾಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ, ಎಲ್ಲರ ಸಮ್ಮುಖದಲ್ಲಿ ಗುರು-ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ.

    ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ’ ಎಂಬ ಸಂದೇಶವೊಂದನ್ನು ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಅಲ್ಲಿಗೆ, ಈಗ ಹಬ್ಬಿರುವ ಸುದ್ದಿ ಸುಳ್ಳು ಎಂದು ಖುದ್ದು ರಚಿತಾ ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts