Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ರಚಿತಾ ಪಾಲಿಗೆ ಉಪ್ಪಿ ಲವ್ ಗುರು!

Saturday, 11.08.2018, 6:52 AM       No Comments

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಸಖತ್ ಬಿಜಿಯಾಗಿರುವ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಇತ್ತೀಚೆಗೆ ತುಂಬ ಪ್ರಾಕ್ಟಿಕಲ್ ಆಗಿದ್ದಾರಂತೆ. ಅದರಲ್ಲೂ ಪ್ರೀತಿ ಹಾಗೂ ಜೀವನದ ಬಗ್ಗೆ ವಾಸ್ತವದ ನೆಲೆಗಟ್ಟಿನಲ್ಲೇ ಯೋಚಿಸುತ್ತಿದ್ದಾರಂತೆ. ಅದಕ್ಕೆ ಕಾರಣ, ‘ರಿಯಲ್ ಸ್ಟಾರ್’ ಉಪೇಂದ್ರ ಎಂದರೆ ನೀವು ನಂಬಲೇಬೇಕು.!

ಉಪೇಂದ್ರ ನಟನೆಯ ‘ಎ’, ‘ಉಪೇಂದ್ರ’, ‘ಬುದ್ಧಿವಂತ’, ‘ಉಪ್ಪಿ 2’ ಸೇರಿ ಅನೇಕ ಚಿತ್ರಗಳು ಪ್ರೇಕ್ಷಕನನ್ನು ಪ್ರಾಕ್ಟಿಕಲ್ ಆಗಿ ಯೋಚಿಸುವಂತೆ ಮಾಡಿವೆ. ಈಗ, ಅದೇ ಮಾದರಿಯಲ್ಲೇ ಸಿದ್ಧಗೊಳ್ಳುತ್ತಿರುವ,‘ಐ ಲವ್ ಯೂ’ ಚಿತ್ರದಲ್ಲಿ ಉಪ್ಪಿಗೆ ಜತೆಯಾಗಿ ರಚಿತಾ ನಟಿಸುತ್ತಿದ್ದು, ಸೆಟ್​ನಲ್ಲಿ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿದ್ದಾರಂತೆ. ‘ಈ ಮೊದಲು ಪ್ರೀತಿ ಎಂದರೆ, ಅದೊಂದು ವಿಶೇಷ ಎಂಬ ಭಾವನೆ ಇತ್ತು. ಆದರೆ, ಈಗ ಅದು ಜೀವನದ ಒಂದು ಭಾಗ ಅಷ್ಟೇ ಎಂದೆನಿಸುತ್ತದೆ. ಅಪ್ಪ-ಅಮ್ಮನ ಪ್ರೀತಿ ಪರಿಶುದ್ಧವಾಗಿರುತ್ತದೆ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಾನೆ ಎಂದಾದರೆ, ಅದಕ್ಕೆ ನಾನಾ ಕಾರಣಗಳಿರಬಹುದು. ಈಗ ಒಬ್ಬ ಹುಡುಗ ಪ್ರೀತಿಸುತ್ತಿದ್ದಾನೆ ಎಂದರೆ, ಅವನು ಯಾವ ಉದ್ದೇಶ ಇಟ್ಟುಕೊಂಡಿದ್ದಾನೆ ಎಂಬುದನ್ನು ತಿಳಿದುಕೊಳ್ಳುವಷ್ಟು ಸಾಮರ್ಥ್ಯ ನನಗೆ ಬಂದಿದೆ. ಅದನ್ನು ಕಲಿಸಿಕೊಟ್ಟಿದ್ದು ಉಪೇಂದ್ರ. ನನಗೆ ಅವರೊಂದು ರೀತಿ ಲವ್ ಗುರು ಇದ್ದಂತೆ’ ಎಂದು ನಗುತ್ತಾರೆ ರಚಿತಾ.

‘ಐ ಲವ್ ಯೂ’ ಚಿತ್ರದ ಡೈಲಾಗ್​ಗಳು ವಾಸ್ತವವಾಗಿ ಯೋಚಿಸುವಂತೆ ಮಾಡುತ್ತವೆಯಂತೆ. ‘ತೆಲುಗಿನಲ್ಲಿ ತೆರೆಕಂಡ ‘ಅರ್ಜುನ್ ರೆಡ್ಡಿ’ ಚಿತ್ರದ ರೀತಿಯಲ್ಲೇ ಈ ಸಿನಿಮಾ ಇರಲಿದೆ. ಇಲ್ಲಿ ಬೋಲ್ಡ್ ದೃಶ್ಯಗಳು ಇಲ್ಲ. ಆದರೆ, ಒಂದು ಸಾಂಗ್​ನಲ್ಲಿ ನಾನು ತುಂಬ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದೇನೆ. ನಾನು ಈವರೆಗೆ ಆ ರೀತಿ ಹಾಡಿನಲ್ಲಿ ನಟಿಸಿಲ್ಲ’ ಎನ್ನುತ್ತಾರವರು. ಇದಲ್ಲದೆ, ನಾಯಕಿಪ್ರಧಾನ ಚಿತ್ರ

‘ಏಪ್ರಿಲ್’ನಲ್ಲಿ ರಚಿತಾ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ‘ನಟಸಾರ್ವಭೌಮ’ ಚಿತ್ರದಲ್ಲಿ ಸಾಮಾನ್ಯ ಹುಡುಗಿಯ ಪಾತ್ರವಂತೆ. ಜತೆಗೆ ‘ಸೀತಾರಾಮ ಕಲ್ಯಾಣ’ ಮತ್ತು ‘ರುಸ್ತುಂ’ ಚಿತ್ರಗಳ ಶೂಟಿಂಗ್​ನಲ್ಲಿ ಅವರು ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top