More

  ಮ್ಯಾಟ್ನಿಗೆ ಹೊರಟ ರಚಿತಾ … ಮತ್ತೊಮ್ಮೆ ಒಂದಾದ ‘ಅಯೋಗ್ಯ’ ಚಿತ್ರದ ಜೋಡಿ

  ಬೆಂಗಳೂರು: ರಚಿತಾ ರಾಮ್ ಕೈಯಲ್ಲಿ ಈಗ ಎಷ್ಟು ಚಿತ್ರಗಳಿವೆ?

  ಉತ್ತರ ಕೊಟ್ಟವರಿಗೆ ಬಹುಮಾನ ಕೊಡುವಷ್ಟರ ಮಟ್ಟಿಗೆ ರಚಿತಾ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಚಿತಾ ರಾಮ್, ಈ ಮಧ್ಯೆ ಇನ್ನೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ‘ಮ್ಯಾಟ್ನಿ’.

  ಇದನ್ನೂ ಓದಿ: ಮದಗಜನ ಭೇಟಿ ಮಾಡಿ ಹಾಯ್​ ಹೇಳಿದ ದರ್ಶನ್​

  ‘ಮ್ಯಾಟ್ನಿ’ ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕರಾಗಿ ನಟಿಸುತ್ತಿದ್ದು, ಇದಕ್ಕೂ ಮುನ್ನ ಸತೀಶ್ ಮತ್ತು ರಚಿತಾ ರಾಮ್, ‘ಅಯೋಗ್ಯ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು. ಎರಡು ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದರೂ, ಈ ಜೋಡಿ ಮತ್ತೆ ರಿಪೀಟ್ ಆಗಿರಲಿಲ್ಲ. ಈಗ ‘ಅಯೋಗ್ಯ’ದ ಜನಪ್ರಿಯ ಜೋಡಿ, ‘ಮ್ಯಾಟ್ನಿ’ಗೆ ಹೊರಟು ನಿಂತಿರುವುದು ವಿಶೇಷ.

  ‘ಮ್ಯಾಟ್ನಿ’ ಚಿತ್ರವನ್ನು ಮನೋಹರ್ ಕಾಂಪಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನು ಸಹ ಅವರೇ ರಚನೆ ಮಾಡುತ್ತಿದ್ದಾರೆ. ಪಾರ್ವತಿ ಎನ್ನುವವರು ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ.

  ಇದನ್ನೂ ಓದಿ: ‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

  ಅಂದಹಾಗೆ, ರಚಿತಾ ಅಭಿನಯದ ‘100’, ‘ಏಕ್ ಲವ್ ಯಾ’, ತೆಲುಗಿನ ‘ಸೂಪರ್ ಮಚ್ಚಿ’ ಚಿತ್ರಗಳು ಬಿಡುಗಡೆ ಸಜ್ಜಾಗುತ್ತಿದ್ದು, ಈ ಮಧ್ಯೆ, ಪ್ರಜ್ವಲ್ ದೇವರಾಜ್ ಜತೆಗೆ ‘ವೀರಂ’, ಧನಂಜಯ್ ಜತೆಗೆ ‘ಮಾನ್ಸೂನ್ ರಾಗ’, ತಮಿಳಿನ ‘ಕೊಲಮಾವು ಕೋಕಿಲ’ ರೀಮೇಕ್, ‘ಏಪ್ರಿಲ್’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ದಸರಾ ಹಬ್ಬದ ಕೊಡುಗೆಯಾಗಿ ಬಿಡುಗಡೆ ಆಗಲಿದೆ ‘ರಣಂ’

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts