More

    ಪ್ರಾಣಿಗಳ ಕಡಿತಕ್ಕೆ ಒಳಗಾದವರಿಗೆ ಉಚಿತ ರೇಬೀಸ್ ಲಸಿಕೆ

    ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತಕ್ಕೊಳಗಾದವರಿಗೆ ಆ್ಯಂಟಿ ರೇಬೀಸ್ ಲಸಿಕೆ (ಎಆರ್‌ವಿ)ಮತ್ತು ರೇಬಿಸ್ ಇಮ್ಯೂನೋಗ್ಲಾಬಿಲಿನ್ ಲಸಿಕೆ (ಆರ್‌ಐಜಿ)ಗಳನ್ನು ಉಚಿತವಾಗಿ ನೀಡುವಂತೆ ಸೂಚಿಸಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

    ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿದ್ದರೂ, ಸಮಯೋಚಿತ ಹಾಗೂ ಸೂಕ್ತ ಚಿಕಿತ್ಸೆಯಿಂದ ಪ್ರಾಣ ಉಳಿಸಬಹುದಾಗಿದೆ. ‘2030ರ ವೇಳೆಗೆ ನಾಯಿಕಡಿತದಿಂದ ಬರುವ ರೇಬೀಸ್ ನ ನಿರ್ಮೂಲನೆ’ ಮಾಡುವುದು ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದ ಧ್ಯೇಯವಾಗಿದೆ.

    ಕರ್ನಾಟಕದಲ್ಲಿ ಈಗಾಗಲೇ ರೇಬೀಸ್ ಅನ್ನು ‘ಗುರುತಿಸಬಹುದಾದ ರೋಗ’ ಎಂದು ೋಷಿಸಲಾಗಿದ್ದು, ಈ ನಿಟ್ಟಿನಲ್ಲಿ ಮಾರಣಾಂತಿಕ ರೇಬೀಸ್‌ನಿಂದ ಜೀವರಕ್ಷಿಸಬಲ್ಲ ಔಷಧಿಗಳಾದ ಆ್ಯಂಟಿ ರೇಬೀಸ್ ವ್ಯಾಕ್ಸಿನ್ ಮತ್ತು ರೇಬೀಸ್ ಇಮ್ಯೂನೋಗ್ಲಾಬಿಲಿನ್ ಗಳನ್ನು ಆಸ್ಪತ್ರೆಗೆ ಔಷಧಗಳನ್ನು ಪೂರೈಸುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್ )ದ ವಾರ್ಷಿಕ ಇಂಡೆಂಟ್ ಪೂರೈಕೆಯ ಭಾಗವಾಗಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

    ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಪರಿಗಣಿಸದೆ ಪ್ರಾಣಿ ಕಡಿತದ ಯಾವುದೇ ಸಂತ್ರಸ್ತರಿಗೆ ಚಿಕಿತ್ಸೆ ನಿರಾಕರಿಸದೆ ಅಗತ್ಯಕ್ಕೆ ಅನುಗುಣವಾಗಿ ಎಆರ್‌ವಿ ಮತ್ತು ಆರ್‌ಐಜಿ ಅನ್ನು ಉಚಿತವಾಗಿ ನೀಡುವಂತೆ ನಿರ್ದೇಶಿಸಲಾಗಿದೆ. ಆರ್‌ಐಜಿ ಅನ್ನು ವಿವೇಚನೆಯಿಂದ ಬಳಸಲು ‘ರೇಬೀಸ್ ರೋಗನಿರೋಧಕ ಮಾರ್ಗಸೂಚಿಗಳು’ ಶೀರ್ಷಿಕೆಯಡಿ ಠಿಠಿ://್ಞ್ಚಛ್ಚ.ಜಟ.ಜ್ಞಿ/ಗ್ಟಜಿಠಿಛ್ಕಿಛಿಈಠಿ/್ಝಜ್ಞಿಜಿಞಜಛಿ/ಎ್ಠಜಿಛ್ಝಿಜ್ಞಿಛಿಠ್ಛಟ್ಟ್ಕಚಿಜಿಛಿಕ್ಟೃಟಢ್ಝಚ್ಡಜಿ.ಛ್ಛ
    ಲಿಂಕ್ ನಲ್ಲಿ ಎನ್‌ಆರ್‌ಸಿಪಿ ಶಿಾರಸ್ಸಿನನ್ವಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts