ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ

ರಬಕವಿ/ಬನಹಟ್ಟಿ: ಭಾರತೀಯ ಯೋಧರ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯ ಖಂಡಿಸಿ ದ್ಚಿಚಕ್ರ ವಾಹನಗಳ ದುರಸ್ತಿದಾರರ ಸಂಘದ ಕಾರ್ಮಿಕರು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಬಳಿಕ ಬನಹಟ್ಟಿ ಎಂ.ಎಂ. ಬಂಗ್ಲೆ ಎದುರು ರಸ್ತೆ ತಡೆ ನಡೆಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ರಬಕವಿ-ಬನಹಟ್ಟಿ ತಹಸೀಲ್ದಾರ್ ಎಸ್.ಬಿ. ಕೂಡಲಿಗೆ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಮುಖಂಡ ಗುರು ಹೊರಟ್ಟ ಮಾತನಾಡಿ, ವೀರಯೋಧರು ಹುತಾತ್ಮರಾಗಿದ್ದಕ್ಕೆ ದೇಶಕ್ಕೆ ತುಂಬಲಾರದ ಹಾನಿಯಾಗಿದೆ. ಭಾರತಮಾತೆ ಅವರ ಕುಟುಂಬಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು. ಸಂಘದ ಅಧ್ಯಕ್ಷ ನಿಜು ಅಮಟಿ, ಶ್ರೀಕಾಂತ ಗಾಯಕವಾಡ, ಮಲ್ಲಿಕಾರ್ಜುನ ಹಟ್ಟಿ, ಕೇದಾರಿ ಕೋಪರ್ಡೆ, ಆನಂದ ಗುಣಕಿ ಇತರರು ಇದ್ದರು

Leave a Reply

Your email address will not be published. Required fields are marked *