ಸಂತ್ರಸ್ತರ ಸಹಾಯಕ್ಕೆ ಸರ್ಕಾರ ಸದಾ ಬದ್ಧ

ರಬಕವಿ/ಬನಹಟ್ಟಿ; ಸಂತ್ರಸ್ತರ ಪ್ರತಿಯೊಂದು ಸಹಾಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸಮೀಪದ ಅಸ್ಕಿ, ಆಸಂಗಿ ಗ್ರಾಮದಲ್ಲಿ ಗುರುವಾರ ಸರ್ಕಾರದಿಂದ ಆಹಾರ ಇಲಾಖೆ ಕೊಡಮಾಡಿದ ಕಿಟ್ ವಿತರಿಸಿ ಮಾತನಾಡಿದರು. ಸಂತ್ರಸ್ತರ ಅನುಕೂಲಕ್ಕಾಗಿ ದಿನನಿತ್ಯದ ವಸ್ತುಗಳಾದ 10 ಕೆಜಿ ಅಕ್ಕಿ, 1 ಕೆಜಿ ಎಣ್ಣೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ, 1 ಕೆಜಿ ತೊಗರಿ ಬೇಳೆ, 5 ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಮುಂದಿನ ದಿನ ಸರ್ಕಾರ ತಮಗೆ ಇನ್ನೂ ಹೆಚ್ಚಿನ ಅನೂಕೂಲ ಮಾಡಿಕೊಡುತ್ತದೆ ಎಂದರು.

ಈ ಯೋಜನೆಯನ್ನು ಕುಲಹಳ್ಳಿ, ಆಸಂಗಿ, ರಬಕವಿ-ರಾವಪುರ, ಹಳಿಂಗಳಿ, ತಮದಡ್ಡಿ, ಮದನಮಟ್ಟಿ ಗ್ರಾಮಗಳಲ್ಲೂ ವಿತರಿಸಲಾಗುತ್ತದೆ ಎಂದರು. ತಹಸೀಲ್ದಾರ್ ಡಿ.ಜಿ. ಮಹಾತ, ಗ್ರೇಡ್-2 ತಹಸೀಲ್ದಾರ್ ಎಸ್.ಬಿ. ಕಾಂಬಳೆ, ಆಹಾರ ಶಿರಸ್ತೆದಾರ್ ಡಿ.ಬಿ. ದೇಶಪಾಂಡೆ, ಆಹಾರ ನಿರೀಕ್ಷಕ ಎಸ್.ಎಲ್. ಕಾಗಿಯವರ, ಪಿ.ಎಸ್. ವಂದಾಲ, ಕಂದಾಯ ನಿರೀಕ್ಷಕ ಶ್ರೀಕಾಂತ ಮಾಯನ್ನವರ, ಮುಖಂಡ ಬಾಬಾಗೌಡ ಪಾಟೀಲ, ಆನಂದ ಕಂಪು, ಹರ್ಷವರ್ದನ ಪಟವರ್ದನ, ಪಾಂಡುರಂಗ ಸಾಲ್ಗುಡೆ, ಪರಶುರಾಮ ಗಾಯಕವಾಡ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *