ಪ್ರತ್ಯೇಕ ದಾಳಿ, 18 ಜೂಜುಕೋರರ ಬಂಧನ

ರಬಕವಿ/ಬನಹಟ್ಟಿ: ನಗರದ ಎರಡು ಕಡೆ ಬುಧವಾರ ದಾಳಿ ನಡೆಸಿದ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ್ದಾರೆ. ಬನಹಟ್ಟಿಯ ಲಕ್ಷ್ಮೀನಗರ ಬಡಾವಣೆಯ ಸಾರ್ವಜನಿಕ ಪ್ರದೇಶದಲ್ಲಿ ಜೂಜಾಟದಲ್ಲಿ ತೊಡಗಿದ್ದ 11 ಜನರನ್ನು ಬಂಧಿಸಿ 12,400 ರೂ. ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕೆರೆ ರಸ್ತೆ ಮಾರ್ಗದ ಸರ್ಕಾರಿ ಶಾಲೆ ಪಕ್ಕದಲ್ಲಿ ಜೂಜಾಟ ಆಡುತ್ತಿದ್ದ ಏಳು ಜನ ಆರೋಪಿಗಳನ್ನು ಬಂಧಿಸಿ 3,200 ರೂ.ವಶಪಡಿಸಿಕೊಂಡಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.